ಯಾರಿಗೋ ಫೋನ್ಪೇ ಮೂಲಕ ಕಳುಹಿಸಬೇಕಾಗಿದ್ದ ಹಣ ಇನ್ಯಾರಿಗೊ ಕಳುಹಿಸಿ ಬಿಟ್ಟಿದ್ದೀರಾ….ಮರಳಿ ಪಡೆಯುವುದು ಹೇಗೆ ?ಇಲ್ಲಿದೆ ಮಾಹಿತಿ….

Views: 83
ಯಾರಿಗೋ ಫೋನ್ಪೇ ಮೂಲಕ ಕಳುಹಿಸಬೇಕಾಗಿದ್ದ ಇನ್ಯಾರಿಗೊ ಕಳುಹಿಸಿ ಬಿಟ್ಟಿದ್ದೀರಾ. ಅನೀರಿಕ್ಷಿತವಾಗಿ ಬೇರೆಯವರ ಖಾತೆಗೆ ತಪ್ಪಾಗಿ ಹೋಗಿರುವ ಹಣವನ್ನು ಈಗ ಮರಳಿ ಪಡೆಯುವುದು ಹೇಗೆ ಅನ್ನೋ ಚಿಂತೆಯಲ್ಲಿದ್ದೀರಾ. ಇದೆಲ್ಲದಕ್ಕೂ ಪರಿಹಾರ ನಿಮ್ಮ ಬಳಿಯೇ ಇದೆ. ಆದರೆ ಇದಕ್ಕಾಗಿ ನೀವು ಕೆಲವು ಕ್ರಮಗಳನ್ನು ಅನುಸರಿಸಬೇಕಾಗುತ್ತದೆ.
ಹೌದು, ಯುಪಿಐ ಮೂಲಕ ಹಣ ವರ್ಗಾವಣೆ ಮಾಡುವಾಗ ಅಚನಾಕ್ ಆಗಿ ಕೆಲವು ಸಮಸ್ಯೆಗಳು ಎದುರಾಗುವುದು ಸಹಜ. ಅದರಲ್ಲೂ ಅಚಾನಕ್ ಆಗಿ ಬೇರೆಯವರ ಖಾತೆಗೆ ನಿಮ್ಮ ಹಣ ವರ್ಗಾವಣೆ ಆಗಿದ್ದರೆ ಏನು ಮಾಡುವುದು ಅಂತಾ ತಲೆ ಮೇಲೆ ಕೈ ಇಟ್ಟುಕೊಳ್ಳುವುದು ಸಾಮಾನ್ಯ. ಹಾಗಂತ ನೀವು ತಪ್ಪಾಗಿ ಕಳುಹಿಸಿದ ಹಣವನ್ನು ಮರಳಿ ಪಡೆಯಲು ಸಾಧ್ಯವೇ ಇಲ್ಲ ಅಂತೇನಿಲ್ಲ. ಇದಕ್ಕಾಗಿ ನೀವು ಕೆಲವು ಅಂಶಗಳನ್ನು ಪರಿಪಾಲಿಸಬೇಕಾಗುತ್ತದೆ. ಅವುಗಳೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ
ತಪ್ಪಾದ ಸಂಖ್ಯೆಯಿಂದಾಗಿ ಬೇರೆಯವರ ಖಾತೆಗೆ ಹಣ ವರ್ಗಾವಣೆ ಆಗಿದೆಯಾ?
ಬೇರೆಯವರ ಖಾತೆಗೆ ತಪ್ಪಾಗಿ ಹಣ ಕಳುಹಿಸಿದರೆ ಅದಕ್ಕೆ ಫೋನ್ಪೇ, ಗೂಗಲ್ ಪೇ, ಪೇಟಿಎಮ್ ಅಪ್ಲಿಕೇಶನ್ಗಳು ಜವಬ್ದಾರರಾಗುವುದಿಲ್ಲ. ಬದಲಿಗೆ ನೀವು ನಿಮ್ಮ ಯುಪಿಐಗೆ ಲಿಂಕ್ ಮಾಡಿರುವ ಬ್ಯಾಂಕ್ ಅನ್ನು ನೇರವಾಗಿ ಸಂಪರ್ಕಿಸಬೇಕಾಗುತ್ತದೆ. ಬೇರಯವರ ಖಾತೆಗೆ ತಪ್ಪಾಗಿ ಹಣ ವರ್ಗಾವಣೆ ಆಗಿರುವ ಬಗ್ಗೆ ನಿಮ್ಮ ಬ್ಯಾಂಕಿನ ಕಸ್ಟಮರ್ ಕೇರ್ಗೆ ಮಾಹಿತಿಯನ್ನು ನೀಡಬೇಕು. ಬ್ಯಾಂಕ್ ಖಾತೆಗೆ ಭೇಟಿ ನೀಡುವ ಮೊದಲು ಮೇಲ್ ಹಾಗೂ ವಹಿವಾಟಿನ ಪ್ರಿಂಟ್ಔಟ್ ದಾಖಲೆಗಳನ್ನು ತೆಗೆದುಕೊಂಡು ಹೋಗಬೇಕಾಗುತ್ತದೆ.
ತಪ್ಪಾಗಿ ಹಣ ಕಳುಹಿಸಿದ ತಕ್ಷಣವೇ ದೂರು ದಾಖಲಿಸಿ
ನೀವು ತಪ್ಪಾದ ಖಾತೆಗೆ ಹಣ ಕಳುಹಿಸಿ ಯೋಚನೆ ಮಾಡುತ್ತಾ ಕೂರುವ ಬದಲು ತಕ್ಷಣವೇ ನಿಮ್ಮ ಸಂಬಂಧಪಟ್ಟ ಬ್ಯಾಂಕ್ಗೆ ಮಾಹಿತಿ ನೀಡಬೇಕು. ಭಾರತೀಯ ರಿಸರ್ವ್ ಬ್ಯಾಂಕ್ (RBI) ಆದೇಶದ ಪ್ರಕಾರ ತಪ್ಪು ಖಾತೆಗೆ ಹಣ ವರ್ಗಾವಣೆಯ ದೂರನ್ನು ಸ್ವೀಕರಿಸಿದ 7 ರಿಂದ 15 ದಿನಗಳಲ್ಲಿ ದೂರನ್ನು ಇತ್ಯರ್ಥಪಡಿಸುವುದು ಅವಶ್ಯಕ. ಆದರಿಂದ ನೀವು ಸಂಬಂಧಪಟ್ಟ ಬ್ಯಾಂಕ್ ಖಾತೆ ಮತ್ತು ಬ್ಯಾಂಕ್ ಅಧಿಕಾರಿಯನ್ನು ಬೇಗ ಸಂಪರ್ಕಿಸಬೇಕು
.ಹಣ ವರ್ಗಾಯಿಸುವ ಮುನ್ನ ನೀವು ಯಾರಿಗೆ ಕಳುಹಿಸುತ್ತಿದ್ದೀರಾ ಅನ್ನೊದನ್ನ ಸೂಕ್ತವಾಗಿ ಪರಿಶೀಲಿಸಿ. ಸಾಧ್ಯವಾದಷ್ಟು ಯುಪಿಐ ಐಡಿಯನ್ನು ಬಳಸಿಕೊಂಡು ನೀವು ಇತರರಿಂದ ಪಾವತಿಗಳನ್ನು ಸ್ವೀಕರಿಸೂವುದು ಸೂಕ್ತ. ಯಾವಾಗಲೂ ಸ್ವೀಕರಿಸುವವರ ಯುಪಿಐ ಐಡಿಯನ್ನು ಎರಡು ಬಾರಿ ಚೆಕ್ ಮಾಡಿ. ತಪ್ಪಾದ ಟ್ರಾನ್ಸಾಕ್ಶನ್ ಆಗದಂತೆ ಹಾಗೂ ಬೇರೆಯವರಿಗೆ ಸುರಕ್ಷಿತವಾಗಿ ಹಣವನ್ನು ಕಳುಹಿಸಲು ಇದು ಸಹಾಯಕವಾಗಿದೆ.
UPI ಪಿನ್ ಯಾರಿಗೂ ಶೇರ್ ಮಾಡಬೇಡಿ
ನಿಮ್ಮ ಯುಪಿಐ ಪಿನ್ ಅನ್ನು ಯಾರೊಂದಿಗೂ ಶೇರ್ ಮಾಡಲು ಹೋಗಬೇಡಿ. ಯುಪಿಐ ಪಾವತಿ ಅಪ್ಲಿಕೇಶನ್ಗಳಲ್ಲಿ ಯುಪಿಐ ಪಿನ್ ಅತಿ ಅವಶ್ಯಕವಾಗಿದೆ. ಯುಪಿಐ ಸಕ್ರಿಯಗೊಳಿಸಿದ ಆಪ್ನ ಪ್ರತಿ ಹಣ ವರ್ಗಾವಣೆಯ ಮೊದಲು ಪಿನ್ ಅನ್ನು ಕೇಳುತ್ತದೆ. ಆದ್ದರಿಂದ, ನಿಮ್ಮ ಯುಪಿಐ ಪಿನ್ ಅನ್ನು ಯಾರಿಗೂ ನೀಡಬೇಡಿ. ಇದು ನಿಮ್ಮ ಎಟಿಎಂ ಪಿನ್ ಮಾದರಿಯಲ್ಲಿಯೇ ಕಾರ್ಯನಿರ್ವಹಿಸುವುದರಿಂದ ಬೇರೆವರಿಗೆ ಶೇರ್ ಮಾಡುವುದು ಸೂಕ್ತವಲ್ಲ.
ನಿಮ್ಮ ಬಳಿ ಯಾವುದಾದರೂ ಒಂದು ಯುಪಿಐ ಪಾವತಿ ಅಪ್ಲಿಕೇಶನ್ ಇದ್ದರೆ ಸೂಕ್ತ. ಹೆಚ್ಚು ಹೆಚ್ಚು ಯುಪಿಐ ಅಪ್ಲಿಕೇಶನ್ ಇದ್ದರೆ ಹಣ ವರ್ಗಾವಣೆ ಮಾಡುವಾದ ಗೊಂದಲಕ್ಕೆ ಒಳಗಾಗುವ ಸಾಧ್ಯತೆಯಿದೆ. ಬಹುತೇಕ ಎಲ್ಲ ಯುಪಿಐ ಆಪ್ಗಳಲ್ಲಿ ಉಚಿತವಾಗಿ ಹಣ ವರ್ಗಾವಣೆ ಮಾಡುವುದಕ್ಕೆ ಅವಕಾಶವಿರುವುದರಿಂದ ಯಾವುದೇ ಬ್ಯಾಂಕ್ ಅಥವಾ ಯುಪಿಐ ಅಪ್ಲಿಕೇಶನ್ ಬಳಕೆ ಮಾಡುವುದು ಉತ್ತಮವಾಗಿದೆ.






