ರಾಜಕೀಯ

ಬಿ.ಎಸ್.ಯಡಿಯೂರಪ್ಪ ಹಾಗೂ ಬಿವೈ.ವಿಜಯೇಂದ್ರ ವಿರುದ್ಧ ಮತ್ತೆ ಬಸನಗೌಡ ಪಾಟೀಲ್ ಯತ್ನಾಳ ವಾಗ್ದಾಳಿ 

Views: 0

ವಿಜಯಪುರ: ನಿನ್ನೆ ರಾತ್ರಿ ಆನಂದ ನಗರದಲ್ಲಿ ನಡೆದ ದಾನಮ್ಮದೇವಿ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಬಿ.ಎಸ್.ಯಡಿಯೂರಪ್ಪ ಹಾಗೂ ಬಿ.ವೈ.ವಿಜಯೇಂದ್ರ ವಿರುದ್ಧ ಮತ್ತೆ ಬಿಜೆಪಿ ಹಿರಿಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ ವಾಗ್ದಾಳಿ ನಡೆಸಿದ್ದಾರೆ.

ವಿಜಯೇಂದ್ರ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಸಿಕ್ಕಿರೋದಕ್ಕೆ ಬಹಿರಂಗವಾಗಿ ಅಸಮಾಧಾನ ಹೊರ ಹಾಕಿರುವ ಅವರು.. ಹಿಂದೆ ಅಪ್ಪ-ಮಗ ನೀವು ನಾಟಕ ಮಾಡಬ್ಯಾಡ್ರಿ ಎಂದು ಹೇಳಿದ್ದೆ. ನಿನ್ನ ಮಂತ್ರಿ ತಗೊಂಡು ಏನ್ಮಾಡೋದು? ಈಗ ಮಂತ್ರಿಯಾಗಿ ಕುಳಿತಿದ್ದಾರೆ. ನಿಕಟಪೂರ್ವ ಎಂದು ಇಟ್ಟುಕೊಳ್ತಾರೆ. ಮಾಜಿ ಅಂತ ಇಟ್ಟುಕೊಂಡರೆ ಏನು ಬ್ಯಾನಿ? ರಾಜ್ಯದಲ್ಲಿ ನಿಕಟಪೂರ್ವ ಎಂದು ಬಂದಿದ್ದು ಯಡಿಯೂರಪ್ಪರಿಂದ. ಮೊದಲು ಮಾಜಿ ಮುಖ್ಯಮಂತ್ರಿ ಅಂತಿದ್ರು. ಮುಖಭಂಗ ಆಗುತ್ತೆ ಎಂದು ನಿಕಟಪೂರ್ವ ಎಂದು ಇಟ್ಟುಕೊಂಡಿದ್ದಾರೆ. ಅವರು ಯಾಕೆ ಹಾಗೆ ಇಟ್ಟುಕೊಂಡಿದ್ದಾರೆ ಅಂದರೆ ಆ ಖುರ್ಚಿ ಬಿಡಬಾರದು ಅಂತಾ ಎಂದು ಲೇವಡಿ ಮಾಡಿದರು.

ರೈತರ ಬಗ್ಗೆ ಕಣ್ಣೀರು ಹಾಕೋದು ನೋಡಿದ್ರೆ ಸಾಕು, ಎಲ್ಲ ನಾಟಕ ಮಾಡೋದು. ಇರುವ ಎಲ್ಲಾ ಹುದ್ದೆಗಳು ತಮ್ಮ ಮಕ್ಕಳಿಗೆ ಬೇಕು. ಏನಾದರೂ ಉಳಿದಿದ್ದರೆ ನಿಮ್ಮ ಮನೆಯ ಬೆಕ್ಕುಗಳಿಗೆ ಕೊಟ್ಟು ಬಿಡಿ ಎಂದು ಮೊನ್ನೆ ಹೇಳಿದ್ದೇನೆ. ಅವಿಷ್ಟು ಪ್ರಧಾನ ಕಾರ್ಯದರ್ಶಿ, ಉಪ ಕಾರ್ಯದರ್ಶಿ ಅಂತ ಮಾಡಿಕೊಳ್ಳಿ. ನಾನು ಅಂಜುವುದಿಲ್ಲ, ಅಂಜಿಸಬೇಕು ಎಂದು ಬ್ಲ್ಯಾಕ್​ಮೇಲ್ ಮಾಡ್ತಾರೆ. ನನಗೆ ಬ್ಲ್ಯಾಕ್​ ಮೇಲ್ ಮಾಡೋಕೆ ಬಂದರೂ ನಿಮ್ಮದು ನನ್ನ ಬಳಿ ಐತಿ ಎಂದು ಎಚ್ಚರಿಕೆ ನೀಡಿದ್ದಾರೆ.

Related Articles

Back to top button
error: Content is protected !!