6 ಕೋಟಿ ಆಸ್ತಿ, 2 ಕೋಟಿ ವಿಮೆಗಾಗಿ ಗಂಡ-ಮಗ-ಸೋದರ ಅಳಿಯನಿಗೆ ನಿಧಾನ ವಿಷ ಬೆರೆಸಿದ ಮಹಿಳೆ!
Views: 16
ಕನ್ನಡ ಕರಾವಳಿ ಸುದ್ದಿ: 6 ಕೋಟಿ ಬಿಜಿನೆಸ್ ಮತ್ತು 2 ಕೋಟಿ ವಿಮೆ ಹಣದ ಆಸೆಗಾಗಿ ಪತ್ನಿಯೇ ಪತಿಗೆ ಆಹಾರದಲ್ಲಿ ನಿಧಾನ ವಿಷ ಬೆರೆಸಿ ಕೊಲ್ಲಲೆತ್ನಿಸಿದ್ದ ಘಟನೆ ಉತ್ತರ ಪ್ರದೇಶದ ಗಾಜಿಯಾ ಎಂಬಲ್ಲಿ ನಡೆದಿದೆ.
ಈ ಎಲ್ಲಾ ಆಸ್ತಿಗೂ ನಾಮಿನಿ ಆಗಿದ್ದ ರೇಣು ಪತಿ-ಭಟ್ನಾಗರ್ ಎಂಬಾಕೆ ಪುತ್ರ-ಸೋದರಳಿಯನನ್ನೇ ಕೊಲ್ಲಲು ಮುಂದಾಗಿದ್ದು ತಿಳಿಯುತ್ತಲೇ ಆರೋಪಿ ಮಹಿಳೆಯನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ.
ಗಾಜಿಯಾಬಾದ್ ನಗರದ ವಸುಂ ಧರಾ ಬಡಾವಣೆ ನಿವಾಸಿ ಸುಶೀಲ್ ಕುಮಾರ್ ಭಟ್ನಾಗರ್ ಟ್ರಾವೆಲ್ ಏಜೆನ್ಸಿ ಬಿಜಿನೆಸ್ ಹೊಂದಿದ್ದಾರೆ. ಕೆಲ ದಿನಗಳಿಂದ ಸುಶೀಲ್, ಮಗ ಮತ್ತು ಸೋದರಳಿಯ ಪದೇ ಪದೇ ಅನಾರೋಗ್ಯ ಕ್ಕೊಳಗಾಗುತ್ತಿದ್ದರು. ಅನುಮಾನದಿಂದ ಸುಶೀಲ್ ವೈದ್ಯಕೀಯ ತಪಾಸಣೆಗೆ ಒಳಗಾದಾಗ ಅವರ ದೇಹದಲ್ಲಿ ಅಪಾಯಕಾರಿ ‘ಸೀಸ’ ಹೆಚ್ಚಿನ ಪ್ರಮಾಣದಲ್ಲಿರುವುದು ಪತ್ತೆಯಾಯಿತು. ನಿಧಾನ ವಿಷಪ್ರಾಶನದ ಸತ್ಯ ತಿಳಿಯುತ್ತಲೇ ಸುಶೀಲ್ ಸೆ.24ರಂದು ಇಂದಿರಾಪುರಂ ಪೊಲೀಸ್ ಠಾಣೆಗೆ ದೂರು ನೀಡಿದರು. ತನಿಖೆ ಆರಂಭಿಸಿದ ಪೊಲೀಸರು ನ.23ರಂದು ರೇಣು ಭಟ್ನಾಗರ್ಳನ್ನು ಬಂಧಿಸಿದ್ದು, ಆರೋಪಿ ತಪ್ಲೊಪ್ಪಿಕೊಂ ಡಿದ್ದಾಳೆ. ಪತಿ-ಮಗ ಮೃತಪಟ್ಟರೆ ಎಲ್ಲಾ ಆಸ್ತಿ-ವಿಮೆ ಹಣ ನನ್ನದಾಗುತ್ತದೆಂಬ ದುರಾಸೆಯಿಂದ ಊಟದಲ್ಲಿ ಸೀಸ ಬೆರೆಸುತ್ತಿದ್ದೆ ಎಂದಿದ್ದಾಳೆ.






