ಸರಕಾರಿ ಪದವಿ ಪೂರ್ವ ಕಾಲೇಜು ಕುಂದಾಪುರದ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಮರುಪರೀಕ್ಷೆಯಲ್ಲಿ ರಾಜ್ಯಕ್ಕೆ 10 ನೇ ರ‍್ಯಾಂಕ್
Views: 156
ಕನ್ನಡ ಕರಾವಳಿ ಸುದ್ದಿ: ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಶ್ರೇಯಾ D/o ಚಂದ್ರಯ್ಯ ಆಚಾರ್ ಮೊದಲ ಪರೀಕ್ಷೆಯಲ್ಲಿ ಕನ್ನಡ – 100, ಇಂಗ್ಲೀಷ್ – 92, ಭೌತಶಾಸ್ತ್ರ – 98, ರಸಾಯನಶಾಸ್ತ್ರ – 96, ಗಣಿತಶಾಸ್ತ್ರ – 99, ಗಣಕವಿಜ್ಞಾನ – 99 ಒಟ್ಟು ಅಂಕ 584. ಮರುಪರೀಕ್ಷೆಯಲ್ಲಿ ಇಂಗ್ಲೀಷ್ – 98 ಅಂಕ ಬಂದಿದ್ದು ಒಟ್ಟು ಅಂಕ 590 ಪಡೆದು ರಾಜ್ಯಕ್ಕೆ 10 ನೇ ರ‍್ಯಾಂಕ್ ಗಳಿಸಿರುತ್ತಾಳೆ.
ಶ್ರೇಯಾ D/o ಚಂದ್ರಯ್ಯ ಆಚಾರ್. ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ನಿಶ್ಮಿತಾ ಎನ್ ಬಿಲ್ಲವ D/o ನಿತ್ಯಾನಂದ ಮೊದಲ ಪರೀಕ್ಷೆಯಲ್ಲಿ ಕನ್ನಡ – 98, ಇಂಗ್ಲೀಷ್ – 96, ಅರ್ಥಶಾಸ್ತ್ರ – 90, ವ್ಯವಹಾರ ಅಧ್ಯಯನ – 100, ಲೆಕ್ಕಶಾಸ್ತ್ರ – 98, ಗಣಕವಿಜ್ಞಾನ – 98 ಒಟ್ಟು ಅಂಕ 580. ಮರುಪರೀಕ್ಷೆಯಲ್ಲಿ ಅರ್ಥಶಾಸ್ತ್ರ – 100, ಗಣಕವಿಜ್ಞಾನ – 99 ಅಂಕ ಬಂದಿದ್ದು ಒಟ್ಟು ಅಂಕ 591 ಪಡೆದು ರಾಜ್ಯಕ್ಕೆ 10 ನೇ ರ‍್ಯಾಂಕ್ ಗಳಿಸಿರುತ್ತಾಳೆ.
ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು, ಬೋಧಕೇತರ ವೃಂದದವರು ಅಭಿನಂದಿಸಿದ್ದಾರೆ.






