ಶಿಕ್ಷಣ

5ನೇ ತರಗತಿ ವಿದ್ಯಾರ್ಥಿಯನ್ನು ಪುಸಲಾಯಿಸಿ ಪರಾರಿಯಾದ 21 ವರ್ಷದ ಶಿಕ್ಷಕಿ! 

Views: 652

ಕನ್ನಡ ಕರಾವಳಿ ಸುದ್ದಿ: 23 ವರ್ಷದ ಶಿಕ್ಷಕಿ 13 ವರ್ಷದ ವಿದ್ಯಾರ್ಥಿಯನ್ನು ಕಟ್ಟಿಕೊಂಡು ಹೋದ ಪ್ರಕರಣ ಗುಜರಾತ್ ನ ಸೂರತ್‌ನಲ್ಲಿ ದಾಖಲಾಗಿದೆ. ಇನ್ನೊಂದು ಆಘಾತಕಾರಿ ವಿಚಾರ ಅಂದ್ರೆ ಇದೀಗ ಆ ಶಿಕ್ಷಕಿ ಗರ್ಭಿಣಿ ಆಗಿದ್ದಾಳೆ ಎಂದು ತಿಳಿದು ಬಂದಿದೆ.

ಏನಿದು ಪ್ರಕರಣ..?

ಮಾನ್ಸಿ ಎಂಬ ಮಹಿಳೆ ಗುಜರಾತ್‌ನ ಸೂರತ್‌ನಲ್ಲಿ ಶಿಕ್ಷಕಿ. ಆಕೆಗೆ 23 ವರ್ಷ. ಅವಳು ತನ್ನ ಶಾಲೆಯಲ್ಲಿ 5ನೇ ತರಗತಿ ಓದುತ್ತಿರುವ 13 ವರ್ಷದ ಹುಡುಗನನ್ನು ಪ್ರೀತಿಸುತ್ತಿದ್ದಳು. ಆತನ ಜೊತೆ ಪ್ರೀತಿಯಲ್ಲಿ ಬಿದ್ದಿದ್ದ ಆಕೆ, ಆತನನ್ನು ಪುಸಲಾಯಿಸಿ ಕಟ್ಟಿಕೊಂಡು ಹೋಗಿದ್ದಾಳೆ.

ಮಗ ನಾಪತ್ತೆ ಸಂಬಂಧ ಹುಡುಗನ ಅಪ್ಪ ಪೊಲೀಸರಿಗೆ ದೂರು ನೀಡಿದ್ದರು. ಪೋಷಕರ ದೂರಿನ ಆಧಾರದ ಮೇಲೆ ಪೊಲೀಸರು ತನಿಖೆಗೆ ಇಳಿದಿದ್ದರು. ನಾಪತ್ತೆಯಾದ ಐದು ದಿನಗಳ ನಂತರ ರಾಜಸ್ಥಾನದ ಗಡಿಯಲ್ಲಿ ಈ ಜೋಡಿಯನ್ನು ಪತ್ತೆ ಮಾಡಿ ಬಂಧಿಸಲಾಗಿದೆ.

ಬಂಧನ ಬೆನ್ನಲ್ಲೇ ತಾನು 20 ವಾರಗಳ ಗರ್ಭಿಣಿ ಎಂದು ಹೇಳಿಕೊಂಡಿದ್ದಾಳೆ. ಅಲ್ಲದೇ ನನ್ನ ಮಗುವಿಗೆ ಆ ಬಾಲಕ ತಂದೆ ಆಗುತ್ತಿದ್ದಾನೆ ಎಂದು ಹೇಳಿದ್ದಾಳೆ. ತನಿಖಾಧಿಕಾರಿಗಳು ಪಿತೃತ್ವ ಪರೀಕ್ಷೆ ನಡೆಸಲು ಮುಂದಾಗಿದ್ದು, ಆಕೆ ಗರ್ಭಪಾತಕ್ಕೆ ವಿನಂತಿಸಿದ್ದಾಳೆ ಎಂದು ವರದಿಯಾಗಿದೆ.

ತನಿಖೆ ವೇಳೆ ಅಪ್ರಾಪ್ತನೊಂದಿಗೆ ಶಿಕ್ಷಕಿ ಲೈಂಗಿಕ ಚಟುವಟಿಕೆಯಲ್ಲಿ ತೊಡಗಿದ್ದಾಗಿ ಒಪ್ಪಿಕೊಂಡಿದ್ದಾಳೆ. ಇನ್ನು ವೈದ್ಯರು ಆ ಅಪ್ರಾಪ್ತ ಮಗುವಿಗೆ ತಂದೆಯಾಗುವ ದೈಹಿಕ ಸಾಮರ್ಥ್ಯ ಹೊಂದಿದ್ದಾನೆ ಎಂದು ದೃಢಪಡಿಸಿದ್ದಾರೆ. ಹಾಗಿದ್ದೂ ಅವನು, ಆ ಭ್ರೂಣದ ತಂದೆಯೇ ಎಂದು ನಿರ್ಧರಿಸಲು ಡಿಎನ್ಎ ಮಾದರಿ ಸಂಗ್ರಹಿಸಿ ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ. ಅದರ ರಿಪೋರ್ಟ್ ಬರಬೇಕಿದೆ.

ಇನ್ನು, ಡಿಎನ್ಎ ರಿಪೋರ್ಟ್ ಬರುವ ಮುನ್ನವೇ ಶಿಕ್ಷಕಿ ಗರ್ಭಪಾತಕ್ಕೆ ಅನುಮತಿ ನೀಡಿ ಕೋರ್ಟ್ ಮೆಟ್ಟಿಲೇರಿದ್ದಾಳೆ. ಭ್ರೂಣ ಹೊಟ್ಟೆಯಲ್ಲೇ ಮುಂದುವರಿದ್ರೆ ಆಕೆಗೆ ಮಾನಸಿಕ ಹಿಂಸೆ ಆಗಬಹುದು ಎಂದು ತಜ್ಞರು ಹೇಳಿದ್ದಾರೆ. ಹೀಗಾಗಿ ಭ್ರೂಣ ತೆಗೆಸಲು ಮುಂದಾಗಿದ್ದಾರೆ ಎನ್ನಲಾಗಿದೆ. ವೈದ್ಯರು ಆಕೆಗೆ 20 ವಾರ ತುಂಬಿ ಮೂರು ದಿನವಾಗಿದೆ ಎಂದು ತಿಳಿಸಿದ್ದಾರೆ.

ಪ್ರಕರಣದ ತನಿಖೆ ತನಿಖೆ ಮುಂದುವರೆದಿದ್ದು, ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (POCSO) ಕಾಯ್ದೆಯಡಿ ಮುಂದಿನ ಕ್ರಮವನ್ನು ನಿರ್ಧರಿಸುವಲ್ಲಿ ಡಿಎನ್‌ಎ ರಿಪೋರ್ಟ್ ಪ್ರಮುಖ ಪಾತ್ರ ವಹಿಸುತ್ತದೆ. ಅಪ್ರಾಪ್ತ ವಯಸ್ಕನನ್ನು ಅಪಹರಿಸಿದ ಆರೋಪದ ಮೇಲೆ ಶಿಕ್ಷಕಿ ವಿರುದ್ಧ ಈಗಾಗಲೇ ಬಿಎನ್‌ಎಸ್ ಸೆಕ್ಷನ್ 137 (2) ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button
error: Content is protected !!