ಇತರೆ

44 ಲಕ್ಷ ರೂ. ವಿಮಾ ಹಣಕ್ಕಾಗಿ ಪತ್ನಿಯ ಕೊಲೆ!

Views: 25

ಕನ್ನಡ ಕರಾವಳಿ ಸುದ್ದಿ ಹಣದ ದುರಾಸೆಗೆ ಬಿದ್ದ ವ್ಯಕ್ತಿಯೊಬ್ಬ ತನ್ನ ಪತ್ನಿಯ ಹೆಸರಿನಲ್ಲಿದ್ದ 44 ಲಕ್ಷ ರೂ.ವಿಮಾ ಮೊತ್ತವನ್ನು ಪಡೆಯಲು ಆಕೆಯನ್ನೇ ಭೀಕರವಾಗಿ ಕೊಲೆ ಮಾಡಿ, ನಂತರ ಅಪಘಾತವೆಂದು ಬಿಂಬಿಸಲು ಮೃತದೇಹದ ಮೇಲೆ ಕಾರು ಹರಿಸಿ ಸುಟ್ಟುಹಾಕಿರುವ ಪೈಶಾಚಿಕ ಘಟನೆ ಉತ್ತರ ಪ್ರದೇಶದ ಹಮೀರ್‌ಪುರದಲ್ಲಿ ನಡೆದಿದೆ.

ಕೊಲೆಯಾದ ಮಹಿಳೆ ರೀಟಾ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಪತಿ ಅಮರ್ ಸಿಂಗ್ ಹಾಗೂ ಆತನ ಮೂವರು ಸಹಚರರನ್ನು ಪೊಲೀಸರು ಬಂಧಿಸಿದ್ದಾರೆ.

ಪತ್ನಿ ಕಾಣೆಯಾಗಿದ್ದಾಳೆ ಎಂದು ಆರೋಪಿ ಅಮರ್ ಸಿಂಗ್ ಸ್ವತಃ ಪೊಲೀಸ್ ಠಾಣೆಗೆ ದೂರು ನೀಡಲು ಬಂದಿದ್ದ. ಆದರೆ ಆತನ ಹೇಳಿಕೆಗಳಲ್ಲಿ ವ್ಯತ್ಯಾಸ ಕಂಡುಬಂದಿದ್ದರಿಂದ ಅನುಮಾನಗೊಂಡ ಪೊಲೀಸರು ತೀವ್ರ ವಿಚಾರಣೆಗೊಳಪಡಿಸಿದಾಗ ನೈಜ ಕೃತ್ಯ ಬಯಲಾಗಿದೆ.

ಲಾಲ್‌ಪುರ ಪ್ರದೇಶದ ಬೈತ್ಕಾ ಧಾಮ್ ದೇವಾಲಯದ ಬಳಿ ಪತ್ನಿಯನ್ನು ಕೋಲು ಮತ್ತು ದೊಣ್ಣೆಗಳಿಂದ ಅಮಾನವೀಯವಾಗಿ ಹೊಡೆದು ಕೊಂದಿದ್ದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ. ಕೊಲೆಯ ನಂತರ ಅದನ್ನು ರಸ್ತೆ ಅಪಘಾತವೆಂದು ತೋರಿಸಲು ಶವದ ಮೇಲೆ ಕಾರು ಹರಿಸಿ, ನಂತರ ಬೆಂಕಿ ಹಚ್ಚಿ ಸುಟ್ಟುಹಾಕಲು ಯತ್ನಿಸಿದ್ದರು.

44 ಲಕ್ಷದ ವಿಮೆ ಮತ್ತು ತಂದೆಯ ಆಕ್ರೋಶ ಮೊದಲ ಪತಿಯ ಮರಣದ ನಂತರ ರೀಟಾ ಕಾನ್ಪುರದಲ್ಲಿ ಹಿಟ್ಟಿನ ಗಿರಣಿಯಲ್ಲಿ ಕೆಲಸ ಮಾಡುತ್ತಿದ್ದ ಅಮರ್ ಸಿಂಗ್‌ನನ್ನು ಭೇಟಿಯಾಗಿ, ಎರಡು ವರ್ಷಗಳ ಹಿಂದೆ ಆತನನ್ನು ಮದುವೆಯಾಗಿದ್ದರು. ರೀಟಾಗೆ ಮೊದಲ ಮದುವೆಯಿಂದ ನಾಲ್ವರು ಮಕ್ಕಳಿದ್ದಾರೆ. ರೀಟಾ ಅವರ ತಂದೆ ಸರ್ವೇಶ್ ಕುಮಾರ್ ನೀಡಿರುವ ಮಾಹಿತಿಯಂತೆ, ಅಮರ್ ಸಿಂಗ್ ಎರಡು ತಿಂಗಳ ಹಿಂದೆಯಷ್ಟೇ ಪತ್ನಿಯ ಹೆಸರಿನಲ್ಲಿ44 ಲಕ್ಷ ರೂ. ಜೀವವಿಮೆ ಪಾಲಿಸಿ ಮಾಡಿಸಿ, 2.60 ಲಕ್ಷ ರೂ. ಪ್ರಥಮ ಪ್ರೀಮಿಯಂ ಪಾವತಿಸಿದ್ದ. ವಿಮಾ ಹಣ ಕೈಸೇರಿದ ತಕ್ಷಣ ಆಕೆಯನ್ನು ಮುಗಿಸಲು ಪ್ಲಾನ್ ಮಾಡಿದ್ದ.

 

Related Articles

Back to top button
error: Content is protected !!