ಇತರೆ

ಅಂತರಾಷ್ಟ್ರೀಯ ಮಟ್ಟದಲ್ಲಿ ಜಾದೂ ಕ್ಷೇತ್ರದ ಸಾಧನೆ: ಜಾದೂಗಾರ್ ಪ್ರಕಾಶ್ ಹೆಮ್ಮಾಡಿಯವರಿಗೆ ಪ್ರಶಸ್ತಿ

Views: 14

ಕನ್ನಡ ಕರಾವಳಿ ಸುದ್ದಿ: ಜಾದೂ ಕ್ಷೇತ್ರದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿರುವ ಪ್ರಸಿದ್ದ ಜಾದೂಗಾರ್ ಪ್ರಕಾಶ್ ಹೆಮ್ಮಾಡಿ ಅವರಿಗೆ ಕನ್ನಡ ಪ್ರಭ-ಏಷ್ಯಾನೆಟ್ ಸುವರ್ಣ ನ್ಯೂಸ್ ನೀಡುವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

2026ರ ಸೆಪ್ಟೆಂಬರ್ 30ರಂದು ಮಲೇಷ್ಯಾದಲ್ಲಿ ಆಯೋಜಿಸಲಾಗಿರುವ Far East Asia Leadership Summit-2026 ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಕುಂದಾಪುರ ತಾಲೂಕಿನ ಹೆಮ್ಮಾಡಿಯವರಾದ ಪ್ರಕಾಶ್ ಹೆಮ್ಮಾಡಿಯವರು ಅಂತರಾಷ್ಟ್ರೀಯ ಮಟ್ಟದಲ್ಲಿ ಜಾದೂ ಮೂಲಕ ಪ್ರಸಿದ್ದಿ ಪಡೆದಿದ್ದಾರೆ. ಈ ತನಕ 4000 ಕ್ಕೂ ಹೆಚ್ಚು ಮ್ಯಾಜಿಕ್ ಶೋ ನೀಡಿದ್ದಾರೆ. ಮುಖ್ಯಮಂತ್ರಿಗಳ ಕೈಯಿಂದಲೇ ಜಾದು ಮಾಡಿಸಿದ ಹೆಗ್ಗಳಿಕೆ ಇವರದ್ದು. ಜಾದೂ ಕ್ಷೇತ್ರದಲ್ಲಿ ಹೊಸ ಹೊಸ ಆವಿಸ್ಕಾರಗಳನ್ನು ಮಾಡುತ್ತಾ ಬೇಡಿಕೆಯನ್ನು ಪಡೆದುಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಜಾದುವಿನ ಮೂಲಕ ಹುಲಿವೇಷ ಕುಣಿತವನ್ನು ಪ್ರದರ್ಶನ ಮಾಡಿದ್ದು ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.

Related Articles

Back to top button
error: Content is protected !!