ಫಾರ್ಚೂನ್ ಅಕಾಡೆಮಿ ಆಫ್ ಹೆಲ್ತ್ ಸೈನ್ಸ್: ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಸ್ವೀಕಾರ ಮತ್ತು ವಾರ್ಷಿಕೋತ್ಸವ ಸಮಾರಂಭ
Views: 316
ಕನ್ನಡ ಕರಾವಳಿ ಸುದ್ದಿ:ಫಾರ್ಚೂನ್ ಅಕಾಡೆಮಿಕ್ ಮತ್ತು ಚಾರಿಟೇಬಲ್ ಟ್ರಸ್ಟ್ ಪ್ರವರ್ತಿತ ಬ್ರಹ್ಮಾವರ- ಹಂಗಾರಕಟ್ಟೆಯ ಫಾರ್ಚೂನ್ ಅಕಾಡೆಮಿ ಆಫ್ ಹೆಲ್ತ್ ಸೈನ್ಸ್ ಸಂಸ್ಥೆಯ ಬಿಎಸ್ಸಿ ನರ್ಸಿಂಗ್ ಮತ್ತು ಜನರಲ್ ನರ್ಸಿಂಗ್ ವಿದ್ಯಾರ್ಥಿಗಳಿಗೆ ಜ್ಯೋತಿ ಬೆಳಗುವ ಪ್ರತಿಜ್ಞಾ ವಿಧಿ ಸ್ವೀಕಾರ ಮತ್ತು ವಾರ್ಷಿಕೋತ್ಸವ ಸಮಾರಂಭ ನವೆಂಬರ್ 8 ರಂದು ನಡೆಯಿತು.
ಮುಖ್ಯ ಅತಿಥಿಯಾಗಿ ಆಗಮಿಸಿದ ಹೂಡೆಯ ತೊನ್ಸೆ ಮೆಡಿಕಲ್ ಸೆಂಟರ್ ನ ಚೀಪ್ ಮೆಡಿಕಲ್ ಆಫೀಸರ್ ಡಾ. ಶ್ರುತ ದಯಾನಂದ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಸ್ವೀಕಾರ, ದೀಪ ಬೆಳಗುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇಡೀ ಜಗತ್ತಿನಲ್ಲಿ ನರ್ಸಿಂಗ್ ಕೋರ್ಸ್ ಗೆ ಉತ್ತಮ ಅವಕಾಶ ಇದ್ದು, ರೋಗಿಗಳಿಗೆ ಮಾನಸಿಕ ಸ್ಥೈರ್ಯ ತುಂಬಿ ಅವರನ್ನು ಸಂಪೂರ್ಣ ಗುಣಮುಖ ಮಾಡುವ ಜವಾಬ್ದಾರಿ ದಾದಿಯ ಮೇಲಿರುತ್ತದೆ. ಆದ್ದರಿಂದ ಇಲ್ಲಿ ಮಾನವೀಯ ಸೇವೆಯೇ ಬಹಳ ಮುಖ್ಯವಾಗಿದೆ. ಈ ಮೂಲಕ ಶುಶ್ರೂಷಕರು ಮಾಡುವ ಸಹಕಾರ ಮೌಲ್ಯಯುತವಾದದ್ದು ಎಂದರು.
ಮಂಗಳೂರು ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ಒರ್ತೋಪೆಡಿಕ್ ಸ್ಪೈನ್ ಸರ್ಜನ್ ಮತ್ತು ಫಾರ್ಚೂನ್ ಅಕಾಡೆಮಿಕ್ ಮತ್ತು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಪ್ರೊ. ಡಾ. ದೇವಿಕ್ ಟಿ.ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ರೋಗಿಗಳ ಆರೈಕೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುವ ನರ್ಸಿಂಗ್ ಸೇವೆ ತರಬೇತಿಯಲ್ಲಿ ಮಾನವೀಯ, ಸದ್ಭಾವ- ಸದ್ಗುಣಗಳನ್ನು ಶಿಕ್ಷಣದ ಜೊತೆಯಲ್ಲಿ ಮೈಗೂಡಿಸಿಕೊಂಡು ವೃತ್ತಿಯ ಬಗ್ಗೆ ಬದ್ಧತೆ,ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ನಿರ್ವಹಿಸಿದಾಗ ಉತ್ತಮ ಬದುಕು ಕಟ್ಟಿಕೊಳ್ಳಲು ಈ ಉದ್ಯೋಗದಿಂದ ಸಾಧ್ಯ ಎಂದರು.
ಈ ಸಂದರ್ಭದಲ್ಲಿ ವಾರ್ಷಿಕ ಕ್ರೀಡಾಕೂಟದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಫಾರ್ಚೂನ್ ಅಕಾಡೆಮಿ ಆಫ್ ಹೆಲ್ತ್ ಸೈನ್ಸ್ ಸಂಸ್ಥೆಯ ಚೇರ್ಮೆನ್ ತಾರನಾಥ್ ಶೆಟ್ಟಿ ಬಹುಮಾನ ವಿತರಿಸಿ, ನೂತನ ವಿದ್ಯಾರ್ಥಿಗಳನ್ನು ಬರಮಾಡಿಕೊಂಡರು.
ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲೆ ಸ್ಮೀತಾ ಮೋಲ್ ಇ. ಎಮ್, ವಿದ್ಯಾರ್ಥಿ ಕೌನ್ಸಿಲ್ ಅಧ್ಯಕ್ಷ ಪ್ರವೀಣ್ ಕುಮಾರ್ , ಟ್ರಸ್ಟಿ ಸುಜಾತ ಟಿ ಶೆಟ್ಟಿ, ಚೇತನ ಪ್ರೌಢಶಾಲಾ ಮುಖ್ಯ ಶಿಕ್ಷಕಿ ಕಲ್ಪನಾ ಶೆಟ್ಟಿ, ಉಪಸ್ಥಿತರಿದ್ದರು.
ಉಪನ್ಯಾಸಕಿ ಶ್ವೇತಾ ಸ್ವಾಗತಿಸಿದರು. ಉಪನ್ಯಾಸಕಿ ರಕ್ಷಾ ದೀಪ ಬೆಳಗಿಸುವ ಮಹತ್ವದ ಕುರಿತು ವಿವರಿಸಿದರು. ಪ್ರೀತಿಕಾ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಉಪನ್ಯಾಸಕಿಯರಾದ ವೆಲ್ಮೀರಾ, ಪೂರ್ಣಿಮಾ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕ ಪವನ್ ಕುಮಾರ್ ವಂದಿಸಿದರು.
















