ಅಜ್ಜಿ ಜೊತೆಗಿನ ಪ್ರೀತಿಯ ಪಾಠ : ಮದರ್ ತೆರೆಸಾದಲ್ಲಿ ‘ಗ್ರಾಂಡ್ ಪೇರೆಂಟ್ಸ್ ಡೇ

Views: 63
ಕನ್ನಡ ಕರಾವಳಿ ಸುದ್ದಿ: ಮದರ್ ತೆರೇಸಾ ಮೆಮೋರಿಯಲ್ ಸ್ಕೂಲ್, ಶಂಕರನಾರಾಯಣದಲ್ಲಿ ‘ಗ್ರಾಂಡ್ ಪೇರೆಂಟ್ಸ್ ಡೇ ‘ಯನ್ನು ವಿಶೇಷ ರೀತಿಯಲ್ಲಿ ಆಚರಿಸಲಾಯಿತು.
ಈ ದಿನವನ್ನು ಆಚರಿಸುವ ಉದ್ದೇಶ, ಮಕ್ಕಳಿಗೆ ಹಿರಿಯರ ಮಹತ್ವವನ್ನು ಮನವರಿಕೆ ಮಾಡಿಸುವುದೂ ಹೌದು, ಜೊತೆಗೆ ಪೀಳಿಗೆಗಳ ನಡುವಿನ ಸಂಬಂಧವನ್ನು ಬಲಪಡಿಸುವುದೂ ಆಗಿತ್ತು. ಇಂತಹ ಕಾರ್ಯಕ್ರಮಗಳು ಹಿರಿಯರ ಅನುಭವ, ಬೆಳೆವಣಿಗೆ ಹಾಗೂ ಮೌಲ್ಯಗಳ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಲು ಸಹಾಯಕವಾಗುತ್ತವೆ.
ಒಂದರಿಂದ ಎಂಟನೇ ತರಗತಿ ವರೆಗಿನ ವಿದ್ಯಾರ್ಥಿಗಳು ತಮ್ಮ ಅಜ್ಜ-ಅಜ್ಜಿಯೊಂದಿಗೆ ಕಳೆದ ಸವಿ ಕ್ಷಣಗಳನ್ನು ಮೆಲುಕು ಹಾಕುತ್ತಾ, ಅದನ್ನು ಕಿರು ವಿಡಿಯೋ ರೂಪದಲ್ಲಿ ದಾಖಲಿಸಿ ಕಳುಹಿಸುವ ಸ್ಪರ್ಧೆಯನ್ನು ನಡೆಸಲಾಯಿತು.ಈ ವಿಡಿಯೋ ತುಣುಕುಗಳಲ್ಲಿ ಮಕ್ಕಳು ತಮ್ಮ ಹೆಮ್ಮೆಯ ಕ್ಷಣಗಳು, ಆಟವಾಡಿದ ಸಂದರ್ಭಗಳು, ಅವರಿಂದ ಕಲಿತ ಪಾಠಗಳು ಮತ್ತು ಕಥೆಗಳು ಮುಂತಾದವುಗಳನ್ನು ಹಂಚಿಕೊಂಡರು.
ಈ ಕಿರುಚಿತ್ರಗಳು ಕೇವಲ ನೆನಪಿನ ಸಂಗ್ರಹವಷ್ಟೇ ಅಲ್ಲದೇ, ಮೌಲ್ಯಮಯ ಸಂಬಂಧಗಳ ಪ್ರತಿಬಿಂಬವಾಗಿಯೂ ಸಹ ಜನರಿಗೆ ಅನುಭವವಾಯಿತು. ಹಿರಿಯರ ಜೀವಿತಾನುಭವ ಮತ್ತು ಪ್ರೀತಿ ಎಂಬ ಅಪಾರ ಸಂಪತ್ತನ್ನು ಹೊಸ ಪೀಳಿಗೆಗೆ ಪರಿಚಯಿಸುವ ಸೇತುವೆಯಾಗಿದ್ದ ಈ ಕಾರ್ಯಕ್ರಮ, ಎಲ್ಲರ ಮನಸ್ಸಿನಲ್ಲಿ ದೀರ್ಘಕಾಲ ಉಳಿಯುವಂತಹ ಪ್ರಭಾವವನ್ನು ಮೂಡಿಸಿತು.
ಈ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪಲಕ ಪ್ರಧಾನ ಮಾಡುವ ಮೂಲಕ ಕಾರ್ಯಕ್ರಮ ಇನ್ನಷ್ಟು ಅರ್ಥಪೂರ್ಣವಾಯಿತು.