ಸಕ್ರೀಯ ರಾಜಕಾರಣದ ಮುನ್ನೆಲೆಗೆ :ಅನಂತ್ ಕುಮಾರ್ ಹೆಗಡೆ ಅಭಿಯಾನ

Views: 113
ಹೊಂದಾಣಿಕೆ ರಾಜಕಾರಣಕ್ಕೆ ಸಂಬಂಧಿಸಿದಂತೆ ಚುನಾವಣಾ ಪೂರ್ವದಲ್ಲಿ ಹಾಗೂ ಚುನಾವಣೆ ಘೋಷಣೆ ಯಾದ ಬಳಿಕ ಅನ್ಯ ಪಕ್ಷಗಳ ಜೊತೆಗೆ ಬಿಜೆಪಿ ನಾಯಕರು ಹೊಂದಾಣಿಕೆ ಮಾಡಿಕೊಂಡಿದ್ದರೇ. ನಿಜಕ್ಕೂ ಹೊಂದಾಣಿಕೆ ನಡೆದಿತ್ತೇ. ಎಂಬುದನ್ನು ಪರಿಶೀಲಿಸಿಸಲು ಜಿಲ್ಲಾವಾರು ವರದಿ ಸಿದ್ದಪಡಿಸಲು ಸೂಚನೆ ನೀಡಿದ ಬೆನ್ನಲ್ಲೇ. ಸಂಸದ ಅನಂತ್ ಕುಮಾರ್ ಹೆಗಡೆ ಇದುವರೆಗೆ ಎಲ್ಲೂ ಕಾಣಿಸಿಕೊಳ್ಳದ ಹೆಗಡೆ ಅಂತರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಕಾಣಿಸಿಕೊಂಡಿದ್ದು, ಜೂನ್ 24ರಂದು ಕಾರವಾರದಲ್ಲಿ ಅಧಿಕಾರಿಗಳ ಜೊತೆ ಸಭೆ ನಿಗದಿ ಮಾಡಿದ್ದು, ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.
ಚುನಾವಣಾ ಸೋಲಿನ ಬಳಿಕ ಕಾರ್ಯಕರ್ತರು ಸಂಸದ ಅನಂತ್ ಕುಮಾರ್ ಹೆಗಡೆಯವರು ಸಕ್ರಿಯ ರಾಜಕಾರಣದ ಮುನ್ನಡೆಗೆ ಬರಬೇಕೆಂಬ ಜಾಲತಾಣದಲ್ಲಿ ಅಭಿಯಾನ ಆರಂಭಿಸಿದ್ದರು. ಇದಕ್ಕೆ ಅನಂತ್ ಕುಮಾರ್ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ, ಈಗ ಸಂಸದ ಅನಂತ್ ಕುಮಾರ್ ಮತ್ತೆ ಸಕ್ರೀಯ ರಾಜಕಾರಣದ ಮುನ್ನಲೆಗೆ ಚುರುಕು ನೀಡಿದ್ದಾರೆ.
ಪ್ರತಾಪ್ ಸಿಂಹ, ಸಿಟಿ ರವಿ, ಹಾಗೂ ವಿಧಾನಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ನೀಡಿದ ಹೊಂದಾಣಿಕೆ ರಾಜಕಾರಣದ ಹೇಳಿಕೆಗೆ ಬಿಜೆಪಿ ಈಗ ಲೋಕಸಭಾ ಚುನಾವಣೆ ಮೇಲೆ ಹೊಂದಾಣಿಕೆ ರಾಜಕಾರಣ ಪರಿಣಾಮ ಬೀರದಂತೆ ಎಚ್ಚರಿಕೆ ವಹಿಸಿದೆ.






