ಇತರೆ

ಹೆದ್ದಾರಿಯಲ್ಲಿ ಭೀಕರ ಅಪಘಾತ ಸ್ಥಳದಲ್ಲಿಯೇ ಮೂರು ಸಾವು

Views: 156

ಬೆಂಗಳೂರು ಮೈಸೂರು ದಶಪಥ ಹೆದ್ದಾರಿ ಮದ್ದೂರು ತಾಲೂಕು ಬಳಿ ಮಂಗಳವಾರ ಮಾರುತಿ ಕಾರು ಹಾಗೂ ಟಾಟಾ ಕಾರುಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಕಾರಿನಲ್ಲಿದ್ದ ಮೂವರು ಸ್ಥಳದಲ್ಲಿಯೇ ಸಾವು.

ಧೀರಜಮಾರ್( 50 )ಅವರ ಪತ್ನಿ ಸೆಲ್ವಿ (47 )ಕಾರು ಚಾಲಕ ನಿರಂಜನ್ (35 )ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಧೀರಜ್ ಕುಮಾರ್ ಅವರು ಪತ್ನಿಯ ಜೊತೆ ಬೆಂಗಳೂರಿಂದ ಮೈಸೂರಿಗೆ ಬಾಡಿಗೆ ಕಾರ್ ಮೂಲಕ ತೆರಳುತ್ತಿದ್ದರು, ಎದುರಿನಿಂದ ಮತ್ತೊಂದು ರಸ್ತೆಯಲ್ಲಿ ಬೆಂಗಳೂರು ಕಡೆಗೆ ಬರುತ್ತಿದ್ದ ಟಾಟಾ ನೆಕ್ಸಾನ್ ಕಾರು ಡಿವೈಡರ್ ಗೆ ಡಿಕ್ಕಿಯಾಗಿದೆ .ನಂತರ ಪಕ್ಕದ ರಸ್ತೆಯಲ್ಲಿ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ಸ್ವಿಫ್ಟ್ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಗಾಯಾಳುಗಳನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಪ್ರಕರಣ ಮದ್ದೂರು ಸಂಚಾರ ಠಾಣೆಯಲ್ಲಿ ದಾಖಲಾಗಿದೆ.

Related Articles

Back to top button
error: Content is protected !!