ಇತರೆ

ಇಬ್ಬರು ಮಕ್ಕಳನ್ನು ಬೆನ್ನಿಗೆ ಕಟ್ಟಿಕೊಂಡು ಬಾವಿಗೆ ಹಾರಿದ ತಂದೆ : ಮೂವರು ಸಾವು

ಕಲಬುರಗಿ ಜಿಲ್ಲೆಯ ಗಡಿ ಗ್ರಾಮ ಕುಂಚಾವರ ಬಳಿ ನಡೆದ ದುರಂತ

Views: 131

ಕಲಬುರಗಿ ಜಿಲ್ಲೆ: ತಂದೆ ತನ್ನ ಇಬ್ಬರು ಮಕ್ಕಳನ್ನು ಬೆನ್ನಿಗೆ ಕಟ್ಟಿಕೊಂಡು ಬಾವಿಗೆ ಹಾರಿದ ಘಟನೆಯಲ್ಲಿ ತಂದೆ ತನ್ನ ಇಬ್ಬರು ಮಕ್ಕಳು ಮೃತ ಪಟ್ಟ ಘಟನೆ ಕಲಬುರಗಿ ಜಿಲ್ಲೆಯ ಗಡಿಗ್ರಾಮ ಕುಂಚಾವರ ಬಳಿ ಭಾನುವಾರ ನಡೆದಿದೆ.

ಹಣಮಂತ ಸಂಜಪ್ಪ ಡಚ್ಚರ್( 40) ಓಂಕಾರ (9) ಹಾಗೂ ಮಗಳು ಅಕ್ಷರ (6 ) ಮೃತ ದುರ್ದೈವಿಗಳು.

ಶುಕ್ರವಾರ ತನ್ನ ಸಹೋದರ ಗ್ರಾಮ ಪಂಚಾಯತ್ ಸದಸ್ಯ ಗೋಪಾಲ ಎಂಬುವರಿಗೆ ಕರೆ ಮಾಡಿ ತಾನು ಮಕ್ಕಳೊಂದಿಗೆ ಬಾವಿಗೆ ಬಿದ್ದು ಸಾಯುತ್ತಿದ್ದೇವೆ. ನನ್ನ ಮತ್ತು ಮಕ್ಕಳ ಶವವನ್ನು ಅಂತ್ಯಕ್ರಿಯೆ ನಡೆಸುವಂತೆ ಕೋರಿಕೊಂಡಿದ್ದಾರೆ. ಕೂಡಲೇ ಸಹೋದರ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಪೊಲೀಸರು ಮತ್ತು ಅಗ್ನಿಶಾಮಕ ದಳದವರು ಎಲ್ಲಿಯೂ ಹುಡುಕಿದರೂ ಮೂವರು ಪತ್ತೆಯಾಗಿಲ್ಲ

ಭಾನುವಾರ ಕುಂಚಾವರ ಬಳಿಯ ತೋಟದ ಬಾವಿಯಲ್ಲಿ ಮೂವರ ಶವ ಪತ್ತೆಯಾಗಿದೆ. ಘಟನೆಗೆ ಕಾರಣ ತಿಳಿದು ಬಂದಿಲ್ಲ ಕುಂಚಾವರ ಠಾಣೆಯ ಪೊಲೀಸರು ಸ್ಥಳಕ್ಕೆ ತೆರಳಿ ಶವವನ್ನು ಹೊರ ತೆಗೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Related Articles

Back to top button
error: Content is protected !!