ಇತರೆ
ಬೆಂಗಳೂರು ಎಕ್ಸಪ್ರೆಸ್ ಹೈವೇನಲ್ಲಿ ಕಾರು ಅಪಘಾತದಲ್ಲಿ ಆರ್ಬಿಐ ನೌಕರ ಸಾವು

Views: 48
ರಾಮನಗರ: ನಗರದ ಮೈಸೂರು ದಶರತ ಎಕ್ಸ್ ಪ್ರೆಸ್ ಹೆದ್ದಾರಿಯ ರಾಮನಗರ ಬಳಿಯ ಡಿಬಿಎಲ್ ಕಚೇರಿ ಬಳಿ ಸಂಭವಿಸಿದ ಕಾರು ಅಪಘಾತದಲ್ಲಿ ಕಾರು ಅಪಘಾತದಲ್ಲಿ ಆರ್ ಬಿಐ ನೌಕರ ಜಗದೀಶ್( 48 )ಮೃತಪಟ್ಟಿದ್ದಾರೆ.
ಮೈಸೂರಿನಲ್ಲಿ ಕೆಲಸ ಮಾಡುತ್ತಿದ್ದ ಜಗದೀಶ್ ಅಲ್ಲಿನ ಆರ್ಬಿಐ ವಸತಿ ಸಮುಚ್ಛಯದಲ್ಲಿ ವಾಸಿಸುತ್ತಿದ್ದರು. ಗುರುವಾರ ಮೈಸೂರಿನಲ್ಲಿ ಕುಟುಂಬದ ಕಾರ್ಯಕ್ರಮ ಮುಗಿಸಿಕೊಂಡು ಕಾರಿನಲ್ಲಿ ಪತ್ನಿ ಇಬ್ಬರು ಮಕ್ಕಳೊಂದಿಗೆ ಕಾರಿನೊಂದಿಗೆ ಬೆಂಗಳೂರಿಗೆ ಬರುತ್ತಿದ್ದರು.
ಅತೀ ವೇಗವಾಗಿ ಚಲಿಸುತ್ತಿದ್ದ ಕಾರು ನಗರದ ಡಿಪಿಎಲ್ ಕಚೇರಿ ಬಳಿ ಬಂದಾಗ ಚಾಲಕ ನಿಯಂತ್ರಣ ಕಳೆದುಕೊಂಡು ರಸ್ತೆ ಮಧ್ಯೆ ಹಾಕಿರುವ ಕಬ್ಬಿಣದ ಬೇಲಿಗೆ ಡಿಕ್ಕಿ ಹೊಡೆದ ಕಾರು ಪಕ್ಕದ ಸಮೀಪ ರಸ್ತೆಗೆ ಕಾರು ಉರುಳಿ ಬಿದ್ದಿದೆ. ಘಟನೆಯಲ್ಲಿ ಜಗದೀಶ್ ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾರೆ






