ಶಿಕ್ಷಣ

ವಕ್ವಾಡಿ ಗುರುಕುಲ ಪಬ್ಲಿಕ್ ಶಾಲೆಯಲ್ಲಿ ರೋಬೋಟಿಕ್ಸ್ ಮತ್ತು ಕೋಡಿಂಗ್ ತರಗತಿಗಳ ಉದ್ಘಾಟನೆ 

Views: 379

ಕನ್ನಡ ಕರಾವಳಿ ಸುದ್ದಿ :ವಕ್ವಾಡಿ ಗುರುಕುಲ ಪಬ್ಲಿಕ್ ಶಾಲೆಯಲ್ಲಿ ರೋಬೋಟಿಕ್ಸ್ ಮತ್ತು ಕೋಡಿಂಗ್ ತರಗತಿಗಳ ಉದ್ಘಾಟನೆ ಜೂನ್ 19ರಂದು ನಡೆಯಿತು.

ಬಾಂಡ್ಯ ಎಜ್ಯುಕೇಶನ್ ಟ್ರಸ್ಟ್ ನ ಮ್ಯಾನೇಜಿಂಗ್ ಟ್ರಸ್ಟಿ ಶ್ರೀಮತಿ ಅನುಪಮಾ ಎಸ್ ಶೆಟ್ಟಿ ಲ್ಯಾಬ್‌ನ ಉದ್ಘಾಟನೆ ನೆರವೇರಿಸಿ, ಶುಭ ಕೋರಿದರು.

ಟಿಂಕರ್‌ಸ್ಪೇಸ್, ಉಡುಪಿಯ ಪ್ರಾದೇಶಿಕ ವ್ಯವಸ್ಥಾಪಕರಾದ ಶ್ರೀ ಪ್ರಣಮ್ ಆಚಾರ್ಯ ಉಪಸ್ಥಿತರಿದ್ದರು.

ಶಾಲಾ ಪ್ರಾಂಶುಪಾಲರಾದ ಡಾ.ರೂಪಾ ಶೆಣೈ ಟಿಂಕರ್‌ಸ್ಪೇಸ್ ನ ಅತಿಥಿಗಳನ್ನು ಪ್ರೀತಿಯಿಂದ ಬರಮಾಡಿಕೊಳ್ಳುವ ಮೂಲಕ, ನಮ್ಮ ಸಂಸ್ಥೆಯು ಈ ಶೈಕ್ಷಣಿಕ ವರ್ಷದಿಂದ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ವಿಶೇಷವಾದ ಹೊಸ ಹೆಜ್ಜೆಯನ್ನಿಡುವುದರ ಜೊತೆಗೆ ಈ ಕಾಲದಲ್ಲಿ ಕೃತಕ ಬುದ್ಧಿಮತ್ತೆ (AI) ಯ ಮಹತ್ವ ಏನು ಮತ್ತು ಭವಿಷ್ಯದಲ್ಲಿ ಅದರಿಂದ ವಿದ್ಯಾರ್ಥಿಗಳಿಗೆ ಸಿಗುವ ಪ್ರಯೋಜನದ ಕುರಿತು ವಿವರಿಸಿದರು.

ಕಾರ್ಯಕ್ರಮವನ್ನು ಸಹಶಿಕ್ಷಕಿ ವರದಾ ಸ್ವಾಗತಿಸಿ, ವಂದಿಸಿದರು.

Related Articles

Back to top button