ಇತರೆ

ಗಂಡನ ನೌಕರಿ ಪಡೆಯುಲು ಪತಿಯನ್ನೇ ಹತ್ಯೆಗೈದಳು!

Views: 98

ಕನ್ನಡ ಕರಾವಳಿ ಸುದ್ದಿ: ರೈಲ್ವೇ ಇಲಾಖೆಯಲ್ಲಿ ನೌಕರಿಯಲ್ಲಿದ್ದ ಗಂಡನನ್ನು ಮಲಗಿದ್ದಾಗಲೇ ಪತ್ನಿ ಹತ್ಯೆ ಮಾಡಿದ ಘಟನೆ ಉತ್ತರಪ್ರದೇಶದ ಬಿಜನೂರ್ ನಲ್ಲಿ ನಡೆದಿದೆ.

ಹಾರ್ಟ್ ಅಟ್ಯಾಕ್ ನಿಂದ ಪತಿ ದೀಪಕ್ ಸಾವನ್ನಪ್ಪಿದ್ದಾರೆ ಎಂದು ಮೊದಲು ಪತ್ನಿ ಶಿವಾನಿ ಹೇಳಿದ್ದಳು ಅದ್ರೆ ಪೋಸ್ಟ್ ಮಾರ್ಟಂ ಮಾಡಿದಾಗ ದೀಪಕ್ ಸಾವಿನ ನಿಜ ಕಾರಣ ಬಹಿರಂಗವಾಗಿದೆ. ಪತಿ ದೀಪಕ್ ಹಾರ್ಟ್ ಅಟ್ಯಾಕ್ ನಿಂದ ಸಾವನ್ನಪ್ಪಿಲ್ಲ , ಬದಲಿಗೆ ಉಸಿರುಗಟ್ಟಿಸಿ ಕೊಲ್ಲಲಾಗಿದೆ ಎಂದು ಪೋಸ್ಟ್ ಮಾರ್ಟಂನಲ್ಲಿ ವರದಿಯಾದಾಗ ಪೊಲೀಸರು ಅಲರ್ಟ್ ಆಗಿದ್ದಾರೆ.

ಬಿಜನೂರ್ ಜಿಲ್ಲಾ ಪೊಲೀಸರು ದೀಪಕ್ ಪತ್ನಿ ಶಿವಾನಿಯನ್ನು ತಮ್ಮದೇ ಶೈಲಿಯಲ್ಲಿ ವಿಚಾರಣೆ ಮಾಡಿದಾಗ. ಈ ವೇಳೆ ಪತಿ ದೀಪಕ್ ಹತ್ಯೆಗೈದು ಆತನ ರೈಲ್ವೇ ನೌಕರಿಯನ್ನು ತಾನು ಪಡೆಯಲು ಸ್ಕೆಚ್ ಹಾಕಿದ್ದಾಗಿ ಬಾಯಿಬಿಟ್ಟಿದ್ದಾಳೆ ಪತ್ನಿ ಶಿವಾನಿ. ಪತಿ ದೀಪಕ್ ಗೆ ಹಾರ್ಟ್ ಅಟ್ಯಾಕ್ ಆಗಿದೆ ಎಂದು ತಾನೇ ಪತಿಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಳು.ಬಿಜನೂರ್ ಜಿಲ್ಲಾ ಆಸ್ಪತ್ರೆಯಲ್ಲಿ ದೀಪಕ್ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಹೇಳಿದ್ದರು.

ಬಳಿಕ ಪತಿಯ ಶವದ ಪೋಸ್ಟ್ ಮಾರ್ಟಂ ಮಾಡುವುದು ಬೇಡವೆಂದ ಪತ್ನಿ ಶಿವಾನಿ ಹಠ ಹಿಡಿದಿದ್ದಳು.ಆದರೇ, ದೀಪಕ್ ಕುತ್ತಿಗೆಯಲ್ಲಿದ್ದ ಗಾಯದ ಗುರುತಿನ ಕಾರಣದಿಂದ ಪೋಸ್ಟ್ ಮಾರ್ಟಂ ಮಾಡಬೇಕೆಂದ ದೀಪಕ್ ಸೋದರ ಪಟ್ಟು ಹಿಡಿದ ಕಾರಣ ಪೋಸ್ಟ್ ಮಾರ್ಟ್ಂ ಮಾಡಲಾಗಿದೆ.

ವರದಿಯಲ್ಲಿ ಉಸಿರುಗಟ್ಟಿಸಿ ಸಾಯಿಸಲಾಗಿದೆ ಎಂದು ವರದಿ ಬಂದ ಬಳಿಕ ಪೊಲೀಸರು ವಿಚಾರಣೆ ಮಾಡಿದಾಗ ಅಸಲಿ ವಿಷಯ ಹೊರಬಂದಿದೆ. ಕಳೆದ ವರ್ಷ ಜನವರಿ 17 ರಂದು ದೀಪಕ್ ಮತ್ತು ಶಿವಾನಿ ಪ್ರೇಮ ವಿವಾಹವಾಗಿದ್ದರು. ಸದ್ಯ ಶಿವಾನಿ ಪೊಲೀಸರ ವಶದಲ್ಲಿದ್ದು. ಈ ಹತ್ಯೆಯಲ್ಲಿ ಬೇರೆ ಯಾರೆಲ್ಲಾ ಭಾಗಿಯಾಗಿದ್ದಾರೆ ಎಂಬ ಬಗ್ಗೆ ತನಿಖೆಯನ್ನು ಕೈಗೊಂಡಿದ್ದಾರೆ. ದೀಪಕ್ ಮತ್ತು ಶಿವಾನಿ ಪ್ರೀತಿಸಿ ಮದುವೆಯಾಗಿದ್ದರು. ಅವಳಿಗಾಗಿ ಪೋಷಕರನ್ನು ತೊರೆದ ದೀಪಕ್ ಆಕೆಯೊಂದಿಗೆ ಪ್ರತ್ಯೇಕವಾಗಿ ವಾಸವಿದ್ದ. ಆದರೂ ಕೂಡ ಪತ್ನಿಗೆ ಪತಿಯ ಉದ್ಯೋಗದ ಮೇಲೆ ಆಸೆ ಬಿದ್ದು ಆತನ ಜೀವವನ್ನು ಬಲಿ ಪಡೆದಿದ್ದಾಳೆ.

Related Articles

Back to top button