ಸಿದ್ದರಾಮಯ್ಯ, ಡಿ. ಕೆ. ಶಿವಕುಮಾರ್ ಸಂಪುಟ ಇಂದು ಪ್ರಮಾಣ ವಚನ

Views: 42
ಸಿದ್ದರಾಮಯ್ಯ, ಡಿ. ಕೆ. ಶಿವಕುಮಾರ್ ಅವರ ಬಣ ರಾಜಕೀಯದ ಕಸರತ್ತಿನ ನಡೆವೆಯೂ ಸಚಿವ ಸಂಪುಟ ಪಟ್ಟಿ ಅಂತಿಮಗೊಂಡಿದ್ದು, ಇಂದು ಬೆಳಿಗ್ಗೆ 24ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿಸಲಿದ್ದಾರೆ.
ಎರಡನೇ ಹಂತದ ವಿಸ್ತರಣೆಯಲ್ಲೇ ಸಂಪೂರ್ಣ ಪ್ರಮಾಣದ ಸಂಪುಟವನ್ನು ರಚಿಸಿದ್ದಾರೆ.
31 ಸಚಿವರ ಪೈಕಿ ಸಿದ್ದು ಬಣಕ್ಕೆ 15 ಕ್ಕೂ ಹೆಚ್ಚು ಸ್ಥಾನಗಳನ್ನು ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹೈಕಮಾಂಡ್ ಕೋಟಾದಲ್ಲಿ ನಾಲ್ಕೈದು ಮಂದಿಗೆ, ಇನ್ನುಳಿದಿರುವ 10 ಮಂದಿ ಡಿಕೆಸಿ ಬಣದವರಿಗೆ ಅವಕಾಶ ನೀಡಲಾಗಿದೆ.
ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಒಬ್ಬರೂ ಸಚಿವ ಸ್ಥಾನ ಪಡೆದುಕೊಂಡಿಲ್ಲ, ವಿಧಾನ ಸಭೆ ಅಥವಾ ವಿಧಾನ ಪರಿಷತ್ ಯಾವುದಕ್ಕೂ ಆಯ್ಕೆಯಾಗದ ರಾಯಚೂರು ಜಿಲ್ಲೆಯ ಎನ್. ಎಸ್. ಬೋಗರಾಜು ಸಚಿವರ ಪಟ್ಟಿಗೆ ಹೆಸರು ಸೇಪ೯ಡೆಗೊಂಡಿದೆ.
ಈ ನಡುವೆ ವಿಧಾನ ಪರಿಷತ್ ಸದಸ್ಯ ಬಿ. ಕೆ. ಹರಿಪ್ರಸಾದ್ ಸಚಿವ ಸ್ಥಾನ ಕೈತಪ್ಪುವುದು ಖಚಿತವಾಗುತ್ತಿದ್ದಂತೆ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಲು ತೀಮಾ೯ನಿಸಿದ್ದಾರೆ.
ಬೆಂಗಳೂರು ಅಭಿವೃದ್ಧಿ, ಜಲಸಂಪನ್ಮೂಲ, ಇಂಧನ, ಗೃಹ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆ ತಮಗೆ ಬೇಕೆಂದು ಡಿಕೆಸಿ ಪಟ್ಟು ಹಿಡಿದಿದ್ದಾರೆ.
ಎಂಬಿ ಪಾಟೀಲ್, ಡಿಕೆಸಿ ಜಲಸಂಪನ್ಮೂಲ ಖಾತೆಗೆ ತಮಗೆ ಬೇಕೆಂದು ಬೇಡಿಕೆ ಇಟ್ಟಿದ್ದು, ಇಬ್ಬರೂ ಪಟ್ಟು ಸಡಿಸಲು ತಯಾರಿಲ್ಲ, ಜಲಸಂಪನ್ಮೂಲ ನೀಡದಿದ್ದರೆ ಯಾವ ಖಾತೆಯೂ ಬೇಡ ಎನ್ನುವ ಹಠಕ್ಕೆ ಎಂಬಿ ಪಾಟೀಲ್ ಬಿದ್ದಿರುವುದರಿಂದ ಹೈಕಮಾಂಡ್ ಇಕ್ಕಟ್ಟಿಗೆ ಸಿಲುಕಿದೆ.







