ರಾಜಕೀಯ

3 ರಾಜ್ಯಗಳ ವಿವಿಧಾನಸಭೆ ಚುನಾವಣೆ ಬಿಜೆಪಿಗೆ ಭರ್ಜರಿ ಗೆಲುವು, ಕಾಂಗ್ರೆಸ್​ನ ಗ್ಯಾರಂಟಿಗಳ​ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ

Views: 0

ದೆಹಲಿ: ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಛತ್ತೀಸ್​ಗಢ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ವಿಜಯ ಮಾಲೆ ಧರಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ 4 ರಾಜ್ಯಗಳ ಮತದಾರರಿಗೆ ನನ್ನ ಅಭಿನಂದನೆಗಳು ಎಂದು ಪ್ರಧಾನಿ ಮೋದಿಯವರು ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

ದೆಹಲಿ ಬಿಜೆಪಿ ಕಚೇರಿಯಲ್ಲಿನ ವಿಜಯೋತ್ಸವದಲ್ಲಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಅವರು, ಎಲೆಕ್ಷನ್​​ನಲ್ಲಿ ಯಾವುದೇ ಗ್ಯಾರಂಟಿ ಕೆಲಸ ಮಾಡಲಿಲ್ಲ. ಮೋದಿ ಗ್ಯಾರಂಟಿ ಮಾತ್ರ ಕೆಲಸ ಮಾಡಿದೆ ಎಂದು ಹೇಳುವ ಮೂಲಕ ಕಾಂಗ್ರೆಸ್​ಗೆ ಟಕ್ಕರ್ ಕೊಟ್ಟರು. ವಿಧಾನಸಭೆಗಳಲ್ಲಿ ಬಿಜೆಪಿಗೆ ಬಹುಮತ ನೀಡಿದ್ದಕ್ಕೆ ಮಹಿಳೆಯರಿಗೆ ವಿಶೇಷ ಗೌರವ ಸಲ್ಲಿಸುತ್ತೇನೆ. ತಾಯಂದಿರು, ಯುವಕರು, ಯುವತಿಯರು ಒಳ್ಳೆಯ ನಿರ್ಧಾರ ಮಾಡಿದ್ದಾರೆ. ಈ ಹಿಂದೆ ಕಾಂಗ್ರೆಸ್​ ಸರ್ಕಾರದಿಂದ ಜನರು ಬೇಸತ್ತಿದ್ದಾರೆ. ಹೀಗಾಗಿ ರಾಜಸ್ಥಾನ್, ಛತ್ತೀಸ್​ಗಢದ ಜನರು ಬಿಜೆಪಿಗೆ ಅಧಿಕಾರ ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ದೇಶದಲ್ಲಿ 4 ಜಾತಿಗಳಿಂದ ಅಭಿವೃದ್ಧಿ ಸಾಧಿಸುತ್ತಿದೆ. ಅದು ಮಹಿಳಾ ಶಕ್ತಿ, ಯುವಶಕ್ತಿ, ರೈತರು, ಬಡವರ್ಗದಿಂದ ಇಂದು ಬಹುದೊಡ್ಡ ಗೆಲುವು ಸಿಕ್ಕಿದೆ. ಜನರಿಗೆ ಬಿಜೆಪಿ ಸರ್ಕಾರದ ಮೇಲೆ ನಂಬಿಕೆ ಇದೆ. ರಾಜಕೀಯ ಜೀವದಲ್ಲಿ ಎಂದೂ ಸುಳ್ಳು ಅಶ್ವಾಸನೆ ನೀಡಲ್ಲ. ಮುಂದೆನೂ ನೀಡೋದಿಲ್ಲ. ಹಲವು ಯೋಜನೆಗಳನ್ನು ನಾವು ಜಾರಿ ಮಾಡಿದ್ದೇವೆ. ನಾರಿ ಸಮ್ಮನ್, ನಾರಿ ಸುರಕ್ಷಾ, ನಾರಿ ಶಕ್ತಿಯಂತಹ ಯೋಜನೆಗಳು ನಮ್ಮ ಕೈ ಹಿಡಿದಿವೆ ಎಂದು ಹೇಳಿದರು.

ರಾಜ್ಯ ಅಭಿವೃದ್ಧಿ ಮಾಡುವುದೇ ಬಿಜೆಪಿಯ ಮೂಲ ಮಂತ್ರವಾಗಿದೆ. ಜನರು ಇನ್ನು ಹೆಚ್ಚಾಗಿ ಬಿಜೆಪಿ ಮೇಲೆ ವಿಶ್ವಾಸ, ನಂಬಿಕೆ ಇಡಬೇಕಿದೆ. ದೇಶದಲ್ಲಿ ತುಷ್ಟೀಕರಣ ರಾಜಕರಣ ತೊಲಗಬೇಕಿದೆ. ಭ್ರಷ್ಟಾಚಾರ ಎಲ್ಲ ನಿರ್ನಾಮ ಆಗುತ್ತದೆ. ಭ್ರಷ್ಟಾಚಾರ, ತುಷ್ಟೀಕರಣ ಮುಕ್ತವಾಗಲಿವೆ. ಕುಟುಂಬ ರಾಜಕಾರಣ ಅನ್ನೋದೆ ದೊಡ್ಡ ಆತಂಕವಾಗಿದೆ. ದೇಶದಲ್ಲಿ ಅಭಿವೃದ್ಧಿ ಮಾತ್ರ ಮೂಲ ಮಂತ್ರ ಆಗಲಿದೆ ಎಂದು ಕಾಂಗ್ರೆಸ್​ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದರು.

Related Articles

Back to top button
error: Content is protected !!