ಕಾಂಗ್ರೆಸ್ ‘ಗ್ಯಾರಂಟಿ ‘ಗೆ ಷರತ್ತು?

Views: 89
ಐದು ಗ್ಯಾರಂಟಿ ಯೋಜನೆಗಳ ಫಲಾನುಭವಿಗಳು ಯಾರು ಎಂಬುದಕ್ಕೆ ಷರತ್ತು ಅನ್ವಯವಾಗಲಿದ್ದು, ಮುಂದಿನ ಸಚಿವ ಸಂಪುಟದ ಸಭೆಯಲ್ಲಿ ಸ್ಪಷ್ಟ ಪಡಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
1. ಗೃಹ ಜ್ಯೋತಿ : ರಾಜ್ಯದ ಪ್ರತಿ ಮನೆಗೆ 200 ಯೂನಿಟ್ ವರೆಗಿನ ಗೃಹ ಬಳಕೆಯ ವಿದ್ಯುತ್ ಉಚಿತ ಯೋಜನೆಗೆ 1,200 ಕೋಟಿ ರೂಪಾಯಿ ವೆಚ್ಚ ಆಗಬಹುದು, ಬಿಪಿಎಲ್ ಹೊರತು ಪಡಿಸಿದವರಿಗೂ ಅನ್ವಯವಾಗುವ ಸಾಧ್ಯತೆ ಇದೆ.
2. ಯುವನಿಧಿ : ರಾಜ್ಯದಲ್ಲಿ 2022-23 ರಲ್ಲಿ ತೇಗ೯ಡೆಯಾದ ಪದವೀದರ ನಿರುದ್ಯೋಗಿಗಳಿಗೆ ಮಾಸಿಕ 3 ಸಾವಿರ ಮತ್ತು ಡಿಪ್ಲೋಮಾ ಪದವೀದರ ನಿರುದ್ಯೋಗಿಗಳಿಗೆ 1.500 ಭತ್ಯೆ ಉದ್ಯೋಗ ದೊರಕುವವರೆಗೆ ಗರಿಷ್ಠ 2 ವಷ೯ಗಳ ಅವಧಿಗೆ ನೀಡಲಾಗುವುದು.
3. ಗೃಹ ಲಕ್ಷ್ಮೀ : ಮನೆಯ ಯಜಮಾನಿಗೆ ಮಾಸಿಕ 2. ಸಾವಿರ ಸಹಾಯಧನ ಬಿಪಿಎಲ್ ಕುಟುಂಬಗಳಿಗೆ ಮಾತ್ರ ನೀಡುವ ಸಂಭವ ಇದೆ.
4. ಅನ್ನಭಾಗ್ಯ: ಪ್ರತಿ ವ್ಯಕ್ತಿಗೆ 10 ಕೆ. ಜಿ. ಅಕ್ಕಿಯನ್ನು ಉಚಿತವಾಗಿ ನೀಡುವ ಯೋಜನೆ ಅಂತ್ಯೋದಯ ಪಡಿತರ ಚೀಟಿ ಮತ್ತು ಬಿಪಿಎಲ್ ನವರಿಗೆ ವಿತರಿಸಲು ತಾತ್ವಿಕ ಒಪ್ಪಿಗೆ ನೀಡಲಾಗಿದೆ.
5. ಶಕ್ತಿ ಯೋಜನೆ : ಉಚಿತ ಬಸ್ ಪಾಸ್ ಯೋಜನೆ ರಾಜ್ಯ ಮಹಿಳೆಯರಿಗೆ ಮಾತ್ರ ಅನ್ವಯವಾಗಲಿದೆ. ಬಿಎಂಟಿಸಿ, ಕೆಎಸ್ಆರ್ ಟಿಸಿ ಕಲ್ಯಾಣ ಕನಾ೯ಟಕ, ವಾಯುವ್ಯ ರಸ್ತೆ ಸಾರಿಗೆ ನಿಗಮಗಳ ಸಾಮಾನ್ಯ ಬಸ್ ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದು






