ರಾಜಕೀಯ

24 ಮಂದಿ 2 ನೇ ಹಂತದಲ್ಲಿ ಸಿದ್ದು ಸಂಪುಟಕ್ಕೆ ಅಂತಿಮ ಪಟ್ಟಿ 

Views: 0

ಮೊದಲ ಹಂತದಲ್ಲಿ 10 ಸಚಿವರೊಂದಿಗೆ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರಕಾರ, 2ನೇ ಹಂತದಲ್ಲಿ ಬಾಕಿ ಇರುವ ಎಲ್ಲಾ 24 ಸ್ಥಾನಗಳನ್ನು ಭತಿ೯ ಮಾಡಲು ನಿಧ೯ರಿಸಿದೆ. ಆದರೂ ಕೊನೆ ಕ್ಷಣದಲ್ಲಿ ಕೆಲವು ಬದಲಾವಣೆಗಳಾದರೂ ಅಚ್ಚರಿ ಇಲ್ಲ ಎಂದು ಮೂಲಗಳಿಂದ ತಿಳಿದು ಬಂದಿದೆ.

ಎರಡನೇ ಹಂತದ ಸಚಿವ ಸಂಪುಟ ವಿಸ್ತರಣೆಯಲ್ಲೂ ಸಿದ್ದರಾಮಯ್ಯ ಅವರ ಕೈ ಮೇಲಾಯಿತು. ವಿಧಾನ ಪರಿಷತ್ ಸದಸ್ಯರನ್ನು ನಿಲ೯ಕ್ಷಿಸಲಾಗುತ್ತಿದೆ ಎಂಬ ಅಸಮಾಧಾನ ಸಚಿವಾಕಾಂಕ್ಷಿಗಳಲ್ಲಿ ಉಂಟಾಗಿದೆ.

ಆಪ್ತರೆಂಬ ಕಾರಣಕ್ಕೆ ಸಚಿವ ಸ್ಥಾನ ನೀಡುವುದು ಪಕ್ಷದ ಹಿತದೃಷ್ಟಿಯಿಂದ ಸರಿಯಲ್ಲ ಆಪ್ತರೆಂಬ ಮಾನದಂಡವನ್ನು ಬದಿಗಿಟ್ಟು ಇತರೆ ವಿಷಯಗಳ ಆಧಾರದಲ್ಲಿ ಸಚಿವ ಸ್ಥಾನಗಳಿಗೆ ಶಾಸಕರನ್ನು ಆಯ್ಕೆ ಮಾಡಿ ಎನ್ನುವ ಸಂದೇಶ ರವಾನಿಸಲಾಗಿದೆ.

ಸಿದ್ದು ಮತ್ತು ಡಿಕೆಸಿ ಪ್ರತ್ಯೇಕವಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖಗೆ೯ ಬೇಟಿ ಮಾಡಿ ತಮ್ಮ ಪಟ್ಟಿ ಮುಂದಿಟ್ಟಿದ್ದಾರೆ. ಈ ಸಮಯದಲ್ಲಿ ನಾಲ್ಕೈದು ಹೆಸರಿರುವ ಪಟ್ಟಿಯನ್ನು ಖಗೆ೯ ಸಹ ಮುಂದಿಟ್ಟರು. ಸುಜೆ೯ವಾಲ, ವೇಣುಗೋಪಾಲ ಅನಾವಾಯ೯ವಾಗಿ ರಾಹುಲ್ ಗಾಂಧಿ ಸಲಹೆ ಪಡೆಯಲು ಮುಂದಾದರು.

ಶನಿವಾರ ಬೆಳಗ್ಗೆ 11:45 ಕ್ಕೆ ರಾಜಭವನದಲ್ಲಿ ಪ್ರಮಾಣ ವಚನ ಬೋಧಿಸಲು ಒಪ್ಪಿಗೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅಂತಿಮಗೊಂಡ ಪಟ್ಟಿಯಲ್ಲಿ ಯಾರ್ಯಾರು ಇರುತ್ತಾರೆ ಎಂಬ ಬಗ್ಗೆ ಅಂತಿಮ ತೀರ್ಮಾನ ಶುಕ್ರವಾರ ತಿಳಿಯಲಿದೆ.

ಈಗ ಅವಕಾಶ ಸಿಗದಿರುವ ಶಾಸಕರಿಗೆ ಎರಡೂವರೆ ವಷ೯ದ ಬಳಿಕ ಸಂಪುಟದಲ್ಲಿ ಸ್ಥಾನ ದೊರೆಯಲಿದೆ, ಪದೇ ಪದೆ ದೆಹಲಿ ಯಾತ್ರೆ ಬೇಡ ಎನ್ನುವ ಕಾರಣಕ್ಕೆ ಹೈಕಮಾಂಡ್ ತೀಮಾ೯ನಿಸಿದೆ.

Related Articles

Back to top button
error: Content is protected !!