ನಿರೂಪಕಿ ಅಪರ್ಣಾ ಮೊದಲ ಪತಿಯಿಂದ ದೂರವಾಗಿದ್ದು ಯಾಕೆ?…

Views: 285
ಅಪರ್ಣಾ ಸಾವಿನ ಬಳಿಕ ಅವರ ವೈಯಕ್ತಿಕ ಜೀವನದ ವಿಚಾರಗಳು ಬೆಳಕಿಗೆ ಬಂದಿವೆ. ಅಂತೆಯೇ ಅವರ ದಾಂಪತ್ಯ ಜೀವನದ ಬಗ್ಗೆಯೂ ಕೆಲವು ವಿಚಾರಗಳು ಬಯಲಾಗಿದ್ದು, ಅಪರ್ಣಾ ಎರಡನೇ ಮದುವೆಯಾಗಿದ್ದರು, ನಾಗರಾಜ್ ವಸ್ತಾರೆ ಅವರು ಎರಡನೇ ಪತಿ ಎಂದು ತಿಳಿದುಬಂದಿದೆ
1985ರಲ್ಲಿ ತೆರೆಗೆ ಬಂದ ಪುಟ್ಟಣ್ಣ ಕಣಗಾಲ್ ನಿರ್ದೇಶನದ ಮಸಣದ ಹೂವು ಸಿನಿಮಾ ಮೂಲಕ ಸಿನಿಮಾ ರಂಗಕ್ಕೆ ಆಗಮಿಸಿದ್ದ ಅಪರ್ಣಾ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದರು. ಕಿರುತೆರೆಯಲ್ಲಿಯೂ ಗುರುತಿಸಿಕೊಂಡರು. ಆದರೆ, ಸಿನಿಮಾಗಳಿಗಿಂತ ಅವರಿಗೆ ಹೆಚ್ಚು ಜನಪ್ರಿಯತೆ ತಂದುಕೊಟ್ಟಿದ್ದು ನಿರೂಪಣೆ. ಸರಿಸುಮಾರು 7 ಸಾವಿರಕ್ಕೂ ಅಧಿಕ ವೇದಿಕೆ ಕಾರ್ಯಕ್ರಮಗಳನ್ನು ನಿರೂಪಣೆ ಮಾಡಿದ್ದ ಹೆಗ್ಗಳಿಕೆ ಅಪರ್ಣಾ ಅವರದ್ದು. ಅಪರ್ಣಾ ಹಾಗೂ ನಾಗರಾಜ್ ತಮ್ಮ ದಾಂಪತ್ಯ ಜೀವನದಲ್ಲಿ ಇಬ್ಬರೂ ಸುಖ-ನೆಮ್ಮದಿಯಿಂದ ಇದ್ದರು. ಆದರೆ ನಾಗರಾಜ್ ಅವರು ಅಪರ್ಣಾ ಅವರಿಗೆ ಎರಡನೇ ಪತಿ ನಾಗರಾಜ್ ಮೊದಲು ಅಪರ್ಣಾಗೆ ಬೇರೊಬ್ಬರ ಜೊತೆ ಮದುವೆಯಾಗಿತ್ತು.

ಅಪರ್ಣಾ ಅವರಿಗೆ ಕಲಾರಂಗದಲ್ಲಿ ಒಳ್ಳೆಯ ಬೇಡಿಕೆ ಇರುವ ವೇಳೆಯೆ ಭಾರತೀಯ ಮೂಲದ NRI ವ್ಯಕ್ತಿ ವಿದೇಶದಲ್ಲಿ ಇದ್ದವರನ್ನು ಅಪರ್ಣಾ ಮದುವೆಯಾದರು. 2 ವರ್ಷಗಳ ಕಾಲ ಅಮೆರಿಕಾದಲ್ಲಿ ಮೊದಲ ಪತಿ ಜತೆ ಸಂಸಾರ ನಡೆಸಿದ್ದರು. ಆದರೆ ಅಮೆರಿಕಾದ ಜೀವರ ಜೀವನ ಇವರಿಗೆ ತುಂಬಾನೆ ನೋವನ್ನು ನೀಡಿತ್ತಂತೆ. ಮೊದಲ ಪತಿಯಿಂದ ಚಿತ್ರ ಹಿಂಸೆ ಒಳಗಾದರಂತೆ. ಹೀಗಾಗಿ ಈ ವ್ಯಕ್ತಿಯಿಂದ ಮಾನಸಿಕ ಹಿಂಸೆ ಅನುಭವಿಸಿದ ಕಾರಣ ಅವರಿಂದ ದೂರವಾದರು. ಅಲ್ಲದೆ ಅವರು ಮೊದಲ ಪತಿ ಕುರಿತಾಗಿ ಎಲ್ಲಿಯೂ ಮಾತನಾಡಲಿಲ್ಲ.
39ನೇ ವಯಸ್ಸಿಗೆ ಎರಡನೇ ಮದುವೆಯಾದ ಅಪರ್ಣಾ!!
ನಂತರ ಒಂಟಿಯಾಗಿ ಜೀವನ ನಡೆಸುತ್ತಿದ್ದ ಅಪರ್ಣಾ ಅವರಿಗೆ ನಿರೂಪಣೆ ಹಾಗೂ ಕೆಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ಅವಕಾಶ ದೊರೆತು ಬಂತು. ಮನರಂಜನಾ ಜಗತ್ತಿನಲ್ಲಿ ಗುರುತಿಕೊಳ್ಳುತ್ತಿದ್ದರು. ಹೊಸ ಜೀವನ ನಡೆಸಬೇಕು ಎಂದು ಕನಸು ಇಟ್ಟುಕೊಂಡಿದ್ದರು. ಈ ವೇಳೆ ಪರಿಚಯವಾದವರೇ ನಾಗರಾಜ್ ವಸ್ತಾರೆ. ಇಬ್ಬರು ಭೇಟಿ ಆಗ್ತಾರೆ. ಈ ವೇಳೆ ನಾಗರಾಜ್ ವಸ್ತಾರೆ ಸ್ನೇಹವಾಯ್ತು.
2003 ರಲ್ಲಿ ನಾಗರಾಜ್ ವಸ್ತಾರೆ ಅವರೊಂದಿಗೆ ಮದುವೆ ಆಗುತ್ತಾರೆ. ಈ ವೇಳೆ ಅಪರ್ಣಾ ಅವರಿಗೆ 39 ವರ್ಷವಾಗಿತ್ತು. ಇಬ್ಬರು ಮಕ್ಕಳಿಲ್ಲದ ನೋವನ್ನು ಇಬ್ಬರ ಪ್ರೀತಿಯಲ್ಲೇ ಕಳೆದ್ರು. ಸಾಕಷ್ಟು ಕನಸುಗಳನ್ನು ಕಂಡಿದ್ದರು. ಅವರಿಗೆ ಸಂತಾನ ಅಭಿವೃದ್ಧಿ ಇಲ್ಲದೆ ಇರುವುದರಿಂದ ಅದೊಂದು ಬೇಜಾರು ಇತ್ತು.
ಸಾವಿನ ಎರಡನೇ ದಿನಕ್ಕೆ ಅಪರ್ಣಾ ಮನೆ ವಿಚಾರ ಬಯಲಿಗೆ!
ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರು ಅಪರ್ಣಾ ಅವರನ್ನು ವೇಶ್ಯಾವಾಟಿಗೆಗೆ ದೂಡಲ್ಪಟ್ಟ ಬಾಲೆಯಾಗಿ ತೆರೆ ಮೇಲೆ ತಂದಿದ್ದರು. ಅಂದಿನಿಂದ ಕನ್ನಡ ಸಿನಿ ರಸಿಕರ, ಕನ್ನಡಿಗರ ಚಿರಪರಿಚಿತರು.

ಅಪರ್ಣಾ 1984ರಲ್ಲಿ ಬಿಡುಗಡೆಯಾದ ಮಸಣದ ಹೂವು ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ನಂತರ ವರ್ಷಗಳಲ್ಲಿ ಕನ್ನಡ ನಿರೂಪಕಿಯಾಗಿ ತಮ್ಮದೇ ಛಾಪೂ ಮೂಡಿಸಿದರು. 2015ರ ನಂತರದಲ್ಲಿ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಮಜಾ ಟಾಕೀಸ್ನಲ್ಲಿ ವರಲಕ್ಷ್ಮೀಯಾಗಿ ಮನೆ ಮಾತಾದರು. ನಕ್ಕು ನಲಿಸುತ್ತಿದ್ದ ಅವರನ್ನು ಕ್ಯಾನ್ಸರ್ ಒಳಗಿದೊಳಕೆ ತಿಂದು ಹಾಕಿದ್ದು ಮಾತ್ರ ವಿಪರ್ಯಾಸ.
ಅಪರ್ಣಾ ಚಂದನ ಟಿವಿ ಚಾನೆಲ್‌ನಲ್ಲಿ ನಿರೂಪಕರಾಗಿ ಪ್ರಸಿದ್ಧರಾಗಿದ್ದಾರೆ. ಅವರು ಕನ್ನಡದ ವಿವಿಧ ಕಾರ್ಯಕ್ರಮಗಳಲ್ಲಿ ಮತ್ತು ಸುದ್ದಿಪ್ರಸಾರಗಳಲ್ಲಿ ತಮ್ಮ ಅದ್ಭುತ ನಿರೂಪಣೆಯಿಂದ ಜನಪ್ರಿಯರಾಗಿದ್ದಾರೆ. ಅವರ ವೃತ್ತಿಪರ ಜೀವನದ ಬಗ್ಗೆ ಹೆಚ್ಚು ಮಾಹಿತಿ ಲಭ್ಯವಿದ್ದರೂ, ಅವರ ವೈಯಕ್ತಿಕ ಜೀವನವನ್ನು ಅವರು ಬಹಳ ಖಾಸಗಿಯಾಗಿ ಇಟ್ಟಿದ್ದಾರೆ.
ಅವರ ಮೊದಲ ಮದುವೆ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಬಹಿರಂಗ ಮಾಡಿಲ್ಲ. ಆದರೆ ಅಪರ್ಣಾ ಅವರಿಗೆ ಎರಡು ಮದುವೆಯಾಗಿದ್ದು ತಮ್ಮ NRI ಮೊದಲನೇ ಪತಿಯಿಂದ ಮಾನಸಿಕ ಹಿಂಸೆ ನೀಡಿದ ಕಾರಣ ಅವರಿಂದ ದೂರಾಗಿದ್ದಾರೆ ಎಂದು ಹೇಳಲಾಗುತ್ತಿದೆ.






