17 ವರ್ಷದ ವಿದ್ಯಾರ್ಥಿ ಜೊತೆ ಶಿಕ್ಷಕಿ ಅನುಚಿತ ಸಂಬಂಧ: ಶಿಕ್ಷಕಿ,ವಿದ್ಯಾರ್ಥಿ ಅರೆಸ್ಟ್…!

Views: 307
ಕನ್ನಡ ಕರಾವಳಿ ಸುದ್ದಿ: ಕ್ಯಾಲಿಫೋರ್ನಿಯಾದ ಪ್ರೌಢಶಾಲೆಯೊಂದರಲ್ಲಿ 17 ವರ್ಷದ ವಿದ್ಯಾರ್ಥಿಯೊಂದಿಗೆ ಶಿಕ್ಷಕಿ ಲೈಂಗಿಕ ಸಂಬಂಧ ಹೊಂದಿದ್ದಾಗಿ ಆರೋಪಿಸಲಾಗಿದ್ದು ಶಿಕ್ಷಕಿಯನ್ನು ಬಂಧಿಸಲಾಗಿದೆ. ಡಲ್ಸೆ ಫ್ಲೋರ್ಸ್ (28) 2016 ರಿಂದ ರಿವರ್‌ಬ್ಯಾಂಕ್ ಪ್ರೌಢಶಾಲೆಯಲ್ಲಿ ಸ್ಪ್ಯಾನಿಷ್ ಭಾಷಾ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದೀಗ ಆಕೆಯನ್ನು 17 ವರ್ಷದ ವಿದ್ಯಾರ್ಥಿ ಜೊತೆ ಅನುಚಿತ ಸಂಬಂಧ ಹೊಂದಿದ್ದಾಳೆ ಎಂಬ ಆರೋಪದ ಮೇಲೆ ಬಂಧಿಸಲಾಗಿದೆ.
ಶಿಕ್ಷಕಿ ತನ್ನ ಆಕ್ಷಾಂಕ್ಷೆಗಳಿಗೆ ಮಿತಿ ಇರಲಿಲ್ಲ. ಹಾಗಾಗಿ ತನ್ನಾಸೆಗೆ ವಿದ್ಯಾರ್ಥಿಗಳನ್ನೇ ಬಳಸಿಕೊಳ್ಳಲು ಮುಂದಾಗಿದ್ದು, ಪ್ರಸ್ತುತ 17 ವರ್ಷದ ಬಾಲಕ ಪೊಲೀಸರ ಅತಿಥಿಯಾಗಿದ್ದಾನೆ.
ಆರೋಪಿ 17ರ ವರ್ಷದ ವಿದ್ಯಾರ್ಥಿ ತರಗತಿಯಲ್ಲಿ ಉತ್ತಮ ಅಂಕಗಳಿಸುತ್ತಿದ್ದ.ಮಾತ್ರವಲ್ಲದೇ, ಪಠ್ಯೇತರ ಚಟುವಟಿಕೆಯಲ್ಲೂ ಮುಂದಿದ್ದ. ಶೇಕಡಾ 100 ರಷ್ಟು ಹಾಜರಾತಿಯೊಂದಿಗೆ ಉತ್ತಮ ವಿದ್ಯಾರ್ಥಿ ಅನ್ನೋ ಬಿರುದು ಪಡೆದಿದ್ದ. ಈ ವಿದ್ಯಾರ್ಥಿಯನ್ನೇ ಡ್ಯೂಲ್ಸ್ ಬುಟ್ಟಿಗೆ ಹಾಕಿಕೊಂಡಿದ್ದಾಳೆ. ಪ್ರೀತಿಯ ಮಾತು, ಕಾಫಿ ಡೇಟ್, ಜ್ಯೂಸ್, ಐಸ್‌ಕ್ರೀಮ್, ನೋಡ್ಸ್, ಡೌಟ್ ಕ್ಲೀಯರ್ ಹೀಗೆ ಟೀಚರ್ ಒಂದಷ್ಟು ಆಸಕ್ತಿ ವಹಿಸಿ ವಿದ್ಯಾರ್ಥಿ ಜೊತೆಗೆ ಆತ್ಮಿಯವಾಗಿದ್ದಾಳೆ. ಬಳಿಕ ಫೋನ್ ಮೂಲಕ ಚಾಟಿಂಗ್ ಶುರು ಮಾಡಿದ್ದಾಳೆ. ಚಾಟಿಂಗ್ ಬೇರೆಡೆಗೆ ತಿರುಗಿದೆ.
ಸ್ಥಳೀಯ ಪೊಲಿಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು, ಇದೀಗ ಶಿಕ್ಷಕಿ ಹಾಗೂ ವಿದ್ಯಾರ್ಥಿಗಳಿಬ್ಬರನ್ನೂ ಪೊಲೀಸರು ಬಂದಿಸಿದ್ದಾರೆ.