ಆರ್ಥಿಕ
₹2000 ಮುಖಬೆಲೆಯ ₹10 ಕೋಟಿ ಜೆರಾಕ್ಸ್ ನೋಟುಗಳು ರಸ್ತೆ ಬದಿಯಲ್ಲಿ ಪತ್ತೆ

Views: 0
ಕನಕಪುರ ರಸ್ತೆಯ ಪಕ್ಕದ ನೈಸ್ ರಸ್ತೆಯ ಬಳಿಯ ಪೊದೆಯಲ್ಲಿ ಸೂಟ್ಕೇಸ್ ಹಾಗೂ ಎರಡು ರಟ್ಟಿನ ಬ್ಯಾಗುಗಳಲ್ಲಿ ಎರಡು ಸಾವಿರ ಮುಖಬೆಲೆಯ ಜೆರಾಕ್ಸ್ ನೋಟುಗಳು ಪತ್ತೆಯಾಗಿದೆ.
ಬಾಕ್ಸ್ ಗಳನ್ನು ಬಿಚ್ಚಿ ನೋಡಿದಾಗ ಜೆರಾಕ್ಸ್ ನೋಟುಗಳು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
₹2000 ಮುಖಬೆಲೆಯ ಒಟ್ಟು ಮೊತ್ತ ₹10 ಕೋಟಿ ಯಾಗಿದ್ದು, ಅಸಲಿ ನೋಟುಗಳ ಜೊತೆ ಸೇರ್ಪಡೆ ಮಾಡಿ ಚಲಾವಣೆ ಮಾಡುವ ಜಾಲ ಇದಾಗಿದೆ ಎಂದು ಅನುಮಾನಿಸಲಾಗಿದೆ.
₹2000 ಮುಖಬೆಲೆಯ ನೋಟುಗಳನ್ನು ಚಲಾವಣೆಯನ್ನು ಆರ್ ಬಿಐ ರದ್ದು ಮಾಡಿದೆ. ಹಳೆಯ ನೋಟುಗಳನ್ನು ಬ್ಯಾಂಕ್ ಗೆ ಪಾವತಿಸಲು ಹೇಳಿದ್ದರಿಂದ ರಸ್ತೆ ಬದಿಗೆ ಎಸೆದಿರಬೇಕು. ಖೋಟಾ ನೋಟು ಜಾಲ ಸಕ್ರಿಯವಾಗಿದೆಯಾ.. ಎಸೆದವರು ಯಾರು.. ಎಂಬುದನ್ನು ತಿಳಿಯಲು ತನಿಖೆ ನಡೆಸಲಾಗುತ್ತಿದೆ.






