ಆರ್ಥಿಕ

₹.2000 ನೋಟು ವಿನಿಮಯ ಮಾಡಿಕೊಳ್ಳಲು ಸೆ.30 ಕೊನೆಯ ದಿನ : ಶೇ.80 ರಷ್ಟು ನೋಟು ವಾಪಸ್

Views: 0

ಮೇ ತಿಂಗಳಲ್ಲಿ ಹೆಚ್ಚಿನ ಮೌಲ್ಯದ ₹.2000 ಕರೆನ್ಸಿ ನೋಟುಗಳನ್ನು ಚಲಾವಣೆಯಿಂದ                   ಹಿಂತೆಗೆದುಕೊಳ್ಳುವುದಾಗಿ ಘೋಷಿಸಿದ ನಂತರ ₹ 3.14 ಲಕ್ಷ ಕೋಟಿ ಮೌಲ್ಯದ ಶೇ. 88 ರಷ್ಟು ₹ 2000 ನೋಟುಗಳು ಬ್ಯಾಂಕುಗಳಿಗೆ ವಾಪಾಸ್ ಆಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ತಿಳಿಸಿದೆ.

ನಿನ್ನೆಯವರೆಗೂ ಚಲಾವಣೆಯಿಂದ ವಾಪಾಸು ಪಡೆದ ₹.2000 ನೋಟುಗಳ ಒಟ್ಟು ಮೌಲ್ಯ 3.14 ಲಕ್ಷ ಕೋಟಿ ರೂ.ಎಂದು ಆರ್ ಬಿಐ ಹೇಳಿದೆ.

ಮೇ 19 ರಿಂದ ಈ ನೋಟುಗಳನ್ನು ಹಿಂಪಡೆಯಲಾಗುತ್ತಿದ್ದು. ನಿನ್ನೆ ಬ್ಯಾಂಕ್ ವ್ಯವಹಾರ ಮುಕ್ತಾಯದ ವೇಳೆ ಶೇ. 88 ರಷ್ಟು ನೋಟುಗಳನ್ನು ಹಿಂಪಡೆಯಲಾಗಿದೆ.

ಈ ನೋಟುಗಳ ಪೈಕಿ ಶೇ. 87 ರಷ್ಟು ಠೇವಣಿ ರೂಪದಲ್ಲಿ ಬಂದಿದ್ದು, ಉಳಿದ ಶೇ. 13ರಷ್ಟು ಹಣವನ್ನು ಇತರ ಮೂಲಗಳಿಂದ ನೋಟುಗಳಿಗೆ ಬದಲಾಯಿಸಲಾಗಿದೆ..

ನೋಟುಗಳ ವಿನಿಮಯ ಅಥವಾ ಠೇವಣಿ ಮಾಡಲು ಸೆ. 30 ಕೊನೆಯ ದಿನವಾಗಿದೆ.

Related Articles

Back to top button
error: Content is protected !!