ರಾಜಕೀಯ

‘ಹೊಂದಾಣಿಕೆ ರಾಜಕೀಯ’ : ಸಿ.ಟಿ. ರವಿ ಬೆನ್ನಲ್ಲೇ ಪ್ರತಾಪ್ ಸಿಂಹ ಕಿಡಿ 

Views: 0

ರಾಜ್ಯ ಬಿಜೆಪಿಯಲ್ಲಿನ ಹೊಂದಾಣಿಕೆ ರಾಜಕೀಯದ ವಿರುದ್ಧ ಕೂಗು ತೀವ್ರಗೊಳ್ಳುತ್ತಿದ್ದು, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿಯ ಬಳಿಕ ಇದೀಗ ಪ್ರತಾಪ್ ಸಿಂಹ ಅವರು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕುರಿತು ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಯಡಿಯೂರಪ್ಪ ನಂತರ ಬಂದವರು ಸಮರ್ಥವಾಗಿ ಅಧಿಕಾರ ನಡೆಸಿದ್ದರೆ, ಬಿಜೆಪಿಗೆ ಈ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಪ್ರತಾಪ ಸಿಂಹ ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರನ್ನು ಪರೋಕ್ಷವಾಗಿ ಟೀಕಿಸಿದ್ದಾರೆ .

ಯಡಿಯೂರಪ್ಪ ಅವರು ತುಂಬಾ ಪ್ರಯತ್ನ ಮಾಡಿ ಬಿಜೆಪಿ ಅಧಿಕಾರಕ್ಕೆ ತಂದರು. ಈ ವೇಳೆ ರಾಜ್ಯಕ್ಕೆ ಪ್ರವಾಹ ಬಂದಿತ್ತು. ಯಡಿಯೂರಪ್ಪ ಒಬ್ಬರೇ ಪರಿಸ್ಥಿತಿ ನಿಭಾಯಿಸಿದ್ದರು. ಕೋವಿಡ್ ವೇಳೆ ಜನರ ಪ್ರಾಣ ಉಳಿಸಲು ಪಣ ತೊಟ್ಟಿದ್ದರು. ಆದರೆ, ಯಡಿಯೂರಪ್ಪ ಬಳಿಕ ಬಂದವರಿಗೆ ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂಬ ಉತ್ಸಾಹ ಬರದೇ ಇರುವುದರಿಂದ ಬಿಜೆಪಿ ಈ ಪರಿಸ್ಥಿತಿಗೆ ಬಂದಿದೆ ಎಂದರು.

ಬಸವರಾಜ್ ಬೊಮ್ಮಾಯಿ ತಿರುಗೇಟು ನೀಡಿ, ನಾನು ಹೊಂದಾಣಿಕೆ ರಾಜಕಾರಣವನ್ನು ಮಾಡಿಲ್ಲ, ಎಂದು ಅದು ನನ್ನ ಜಾಯಮಾನವೇ ಅಲ್ಲ ಎಂದರು

Related Articles

Back to top button
error: Content is protected !!