ಇತರೆ

ಹೆಬ್ರಿ: ಬಸ್ ಮತ್ತು ಕಾರು ನಡುವೆ ಅಪಘಾತ ಇಬ್ಬರು ಮೃತ್ಯು

Views: 0

ಹೆಬ್ರಿ: ಉಡುಪಿಯಿಂದ ಆಗುಂಬೆಗೆ ಹೋಗುತ್ತಿರುವ ಬಸ್ ಹಾಗೂ ಚೆನ್ನಗಿರಿಯಲ್ಲಿ ಮದುವೆ ಮುಗಿಸಿ ಉಡುಪಿಗೆ ಬರುತ್ತಿರುವ ಶಿಕ್ಷಕರ ಕಾರಿನ ನಡುವೆ ಅಪಘಾತ ಸಂಭವಿಸಿ, ಉಡುಪಿ ಡಿಡಿಪಿಐ ಕಚೇರಿಯ ಪ್ರಥಮ ದರ್ಜೆ ಸಹಾಯಕ ಸುಬ್ಬಣ್ಣ ಗಾಣಿಗ, ಉಡುಪಿ ಇಂದಿರಾನಗರದಲ್ಲಿ ದೈಹಿಕ ಶಿಕ್ಷಕರಾಗಿರುವ ಸೋಮಶೇಖರ ಮೃತಪಟ್ಟಿದ್ದಾರೆ.

ಗಂಭೀರ ಗಾಯಗೊಂಡ ಶಿಕ್ಷಕ ಸುದರ್ಶನ, ಕಾರು ಚಾಲಕ ಸತೀಶ್ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಪಘಾತ ತೀವ್ರತೆಗೆ ಬಸ್ ಒಳಗಡೆ ಸಿಲುಕಿದ್ದು ಕಾರನ್ನು ಹೊರತೆಗೆಯಲು ಹರ ಸಾಹಸ ಪಡಬೇಕಾಯಿತು ಅಂಬುಲೆನ್ಸ್ ಸಿಗದೇ ಇರುವುದರಿಂದ ಈ ಮಾರ್ಗದಲ್ಲಿ ಹೋಗುತ್ತಿರುವ ಪ್ರಮೋದ್ ಎಂಬುವರು ಗಂಭೀರ ಗಾಯಗೊಂಡವರನ್ನು ತನ್ನ ಕಾರಿಗೆ ಹಾಕಿಕೊಂಡು ಹೆಬ್ರಿ ಆಸ್ಪತ್ರೆಗೆ ಸೇರಿಸಿದರು .ತುರ್ತು ಚಿಕಿತ್ಸೆಗೆ ಸ್ಪಂದಿಸದೆ ಇಬ್ಬರು ಮೃತಪಟ್ಟಿದ್ದಾರೆ

Related Articles

Back to top button
error: Content is protected !!