ಇತರೆ

ಹೆಬ್ರಿ: ನಿದ್ರೆಯಲ್ಲಿದ್ದ ವೇಳೆ ಮನೆಯ ಕಿಟಕಿ ಮುರಿದು ಚಿನ್ನ, ಬೆಳ್ಳಿಯ ಆಭರಣ ಕಳ್ಳತನ:ಮೂವರ ಬಂಧನ

Views: 82

ಕನ್ನಡ ಕರಾವಳಿ ಸುದ್ದಿ: ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಅನಂತನಗರದಲ್ಲಿ ನಡೆದಿದ್ದ ಸುಮಾರು 60 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ಬೆಳ್ಳಿಯ ಆಭರಣ ಕಳ್ಳತನ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಮೂವರು ಅಂತರ್‌ರಾಜ್ಯ ಕಳ್ಳರನ್ನು ಬಂಧಿಸಿದ್ದಾರೆ.

ಮೇ 25ರಂದು ರಾತ್ರಿ ಮನೆಯವರು ನಿದ್ರೆಯಲ್ಲಿದ್ದ ವೇಳೆ ಮನೆಯ ಹಿಂಭಾಗದ ಕಿಟಕಿಯ ಕೊಂಡಿಯನ್ನು ಮುರಿದು ಒಳನುಗ್ಗಿದ ಕಳ್ಳರು, ಮೊದಲ ಮಹಡಿಯ ಕೋಣೆಯ ಬೀರುವಿನಲ್ಲಿದ್ದ ಸುಮಾರು 59.97 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಮತ್ತು ಬೆಳ್ಳಿಯ ಆಭರಣಗಳನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದರು.

ಪ್ರಕರಣದ ತನಿಖೆ ಕೈಗೊಂಡ ಕಾರ್ಕಳ ವೃತ್ತ ನಿರೀಕ್ಷಕ ಮಂಜಪ್ಪ ಡಿ.ಆರ್. ಹಾಗೂ ಪ್ರಭಾರ ವೃತ್ತ ನಿರೀಕ್ಷಕ ರಾಘವೇಂದ್ರ ಆರ್. ನೇತೃತ್ವದ ವಿಶೇಷ ಪೊಲೀಸ್ ತಂಡವು ಆರೋಪಿಗಳಾದ ರಬ್ದಿನ್ ಸಲೀಂ (51), ಹರೀಶ್ ಶೆಟ್ಟಿ (40) ಮತ್ತು ಸಫಾನ್ (32) ಅವರನ್ನು ಬಂಧಿಸಲಾಗಿದೆ.

ಬಂಧಿತರಿಂದ ಒಟ್ಟು 37.87 ಲಕ್ಷ ರೂ. ಮೌಲ್ಯದ ಚಿನ್ನದ ಗಟ್ಟಿ ಹಾಗೂ ಬೆಳ್ಳಿಯ ಆಭರಣಗಳು, ಜೊತೆಗೆ 4 ಲಕ್ಷ ರೂ. ಮೌಲ್ಯದ ಆಲ್ಟೋ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣದ ಮತ್ತೋರ್ವ ಆರೋಪಿಯಾಗಿರುವ ಪ್ರಕಾಶ್ ಎಂಬಾತ ತಲೆಮರೆಸಿಕೊಂಡಿದ್ದು, ಆತನ ಪತ್ತೆಗಾಗಿ ಶೋಧ ಕಾರ್ಯ ಮುಂದುವರಿದಿದೆ.

ಬಂಧಿತ ಆರೋಪಿಗಳ ವಿರುದ್ಧ ಕೇರಳ, ಕಾಸರಗೋಡು, ಕಾರವಾರ, ಮಂಗಳೂರು ಹಾಗೂ ಮೂಡುಬಿದ್ರೆ ಪ್ರದೇಶಗಳಲ್ಲಿ ಸುಲಿಗೆ, ಕೊಲೆ, ಹಲ್ಲೆ ಹಾಗೂ ಮಾದಕ ವಸ್ತುಗಳಿಗೆ ಸಂಬಂಧಿಸಿದ ಹಲವು ಪ್ರಕರಣಗಳು ದಾಖಲಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Related Articles

Back to top button
error: Content is protected !!