ಇತರೆ

ಹುಬ್ಬಳ್ಳಿಯಲ್ಲಿ ಪ್ರೇಮ ವಿಚಾರಕ್ಕೆ ಚಾಕುವಿನಿಂದ ಇರಿದು ಯುವತಿಯ ಭೀಕರ ಹತ್ಯೆ

Views: 191

ಹುಬ್ಬಳ್ಳಿ, ನೇಹಾ ಹತ್ಯೆ ಪ್ರಕರಣ ಮಾಸುವ ಮುನ್ನವೇ ಇನ್ನೊಂದು ಚಾಕು ಇರಿತದ ಪ್ರಕರಣ ನಗರದಲ್ಲಿ ನಡೆದಿದ್ದು, ಯುವಕನೋರ್ವ ಚಾಕುವಿನಿಂದ ಯುವತಿಯನ್ನು ಇರಿದು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಇಂದು ಬೆಳಗಿನ ಜಾವ ನಡೆದಿದೆ.

ಈ ಘಟನೆ ನಗರದ ಜನತೆಯನ್ನು ಬೆಚ್ಚಿ ಬೀಳಿಸಿದೆ.ನಗರದ ವೀರಾಪೂರ ಓಣಿಯ ನಿವಾಸಿ ಅಂಜಲಿ ಅಂಬಿಗೇರ (20) ಹತ್ಯೆಯಾದ ಯುವತಿ. ಅಲ್ಲಿನ ನಿವಾಸಿಯೇ ವಿಶ್ವನಾಥ ಅಲಿಯಾಸ್ ಗಿರೀಶ್ ಸಾವಂತ (21) ಎಂಬಾತ ಚಾಕುವಿನಿಂದ ಇರಿದು ಕೊಲೆ ಮಾಡಿದ ಆರೋಪಿ.

ಇಂದು ಬೆಳಗಿನ ಜಾವ ನಗರದ ವೀರಾಪೂರ ಓಣಿಯಲ್ಲಿನ ಗುಡಿಓಣಿಯಲ್ಲಿನ ಅಂಜಲಿ ನಿವಾಸಕ್ಕೆ ತೆರಳಿದ ಆರೋಪಿ ವಿಶ್ವನಾಥ ಮನೆಯ ಬಾಗಿಲು ಬಡದಿದ್ದಾನೆ. ಬಾಗಿಲು ತೆಗೆಯುತ್ತಿದ್ದಂತೆ ಅಂಜಲಿಗೆ ಏಕಾಏಕಿ ಮನಬಂದಂತೆ ಚಾಕು ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾನೆ.

ಪ್ರೇಮ ವಿಚಾರವೇ ಈ ಕೊಲೆಗೆ ಕಾರಣ ಎನ್ನಲಾಗಿದೆ.ಘಟನೆ ನಡೆಯುತ್ತಿದ್ದಂತೆ ಅಂಜಲಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಆರೋಪಿಗೆ ಎನ್ಕೌಂಟರ್ ಮಾಡಬೇಕು ಎಂದು ಮೃತ ಅಂಜಲಿ ಸಹೋದರಿ ಮಾಧ್ಯಮದ ಮೂಲಕ ಒತ್ತಾಯಿಸಿದರು. ನಮ್ಮ ಸಹೋದರಿಗೆ ಆದಂತಹ ಪರಿಸ್ಥಿತಿ ಯಾವ ಹೆಣ್ಣುಮಕ್ಕಳಿಗೂ ಬರಬಾರದು ಎಂದು ಆಕ್ರಂದನಗೈದರು.ಘಟನಾ ಸ್ಥಳಕ್ಕೆ ಬೆಂಡಿಗೇರಿ ಪೊಲೀಸ್ ಠಾಣೆಯ ಸಿಬ್ಬಂದಿ ಹಾಗೂ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.

Related Articles

Back to top button
error: Content is protected !!