ಹಾಡಹಗಲೇ ಉದ್ಯಮಿ ಮನಗೆ ನುಗ್ಗಿರುವ ದುಷ್ಕರ್ಮಿಗಳು ಗನ್ ತೋರಿಸಿ ದರೋಡೆಗೆ ಯತ್ನ

Views: 68
ಕನ್ನಡ ಕರಾವಳಿ ಸುದ್ದಿ: ಬೆಳಗಾವಿ ವೀರಭದ್ರ ನಗರದಲ್ಲಿ ಹಾಡಹಗಲೇ ಉದ್ಯಮಿ ಮನಗೆ ನುಗ್ಗಿರುವ ಐವರು ದುಷ್ಕರ್ಮಿಗಳು ಗನ್ ತೋರಿಸಿ ದರೋಡೆಗೆ ಯತ್ನಿಸಿರುವ ಘಟನೆ ನಡೆದಿದೆ.
ರಿಯಲ್ ಎಸ್ಟೇಟ್ ಉದ್ಯಮಿ ಮೈನುದ್ದೀನ ಪಠಾಣ್ ಅವರ ಮನೆಗೆ ನುಗ್ಗಿ ದರೋಡೆಕೊರರು ಉದ್ಯಮಿಗೆ ಮತ್ತು ಕುಟುಂಬಸ್ಥರ ತಲೆಗೆ ಗನ್ ಹಿಡಿದು ಮನೆ ದರೋಡೆಗೆ ಯತ್ನಿಸಿ ಖಾಲಿ ಕೈಯಲ್ಲಿ ಎಸ್ಕೇಪ್ ಆಗಿದ್ದಾರೆ.
ಉದ್ಯಮಿ ಮೈನುದ್ದೀನ ಪಠಾಣ್ ಅವರ ಬೆಳಗಾವಿ ನಗರದ ಬುಡಾ ಕಚೇರಿ ಪಕ್ಕದ ಅಸೋದಾ ಸೊಸೈಟಿಯಲ್ಲಿರುವ ಮನೆಗೆ ನುಗ್ಗಿದ್ದಾರೆ. ಬಳಿಕ ರಿಯಲ್ ಎಸ್ಟೇಟ್ ಉದ್ಯಮಿ ಪತ್ನಿ ಮತ್ತು ಮಗಳನ್ನು ಬಾತ್ ರೂಮ್ ನಲ್ಲಿ ಕೂಡಿಹಾಕಿದ್ದಾರೆ. ಬಳಿಕ ಉದ್ಯಮಿಯ ತಲೆಗೆ ಐವರು ಗನ್ ಇಟ್ಟು ಕಳ್ಳತನಕ್ಕೆ ಯತ್ನ ನಡೆಸಿದ್ದಾರೆ. ಇಷ್ಟರಲ್ಲಿ ಬಾತ್ ರೂಮಿನಲ್ಲಿ ಬಂಧಿಯಾಗಿದ್ದ ಮೈನುದ್ದೀನ ಪಠಾಣ್ ಕುಟುಂಬವು ಶೌಚಾಲಯದ ಒಳಗಿನಿಂದ ತಾವೂ ಲಾಕ್ ಮಾಡಿಕೊಂಡು ಗ್ಲಾಸ್‌ಗಳನ್ನು ಕೆಳಗಡೆ ಚೆಲ್ಲಿ ಕೂಗಾಟ ಮಾಡಿದೆ. ಕುಟುಂಬಸ್ಥರು ಕೂಗಾಟ ಚೀರಾಟ ಹೆಚ್ಚಾಗ್ತಿದ್ದಂತೆ ಕಳ್ಳತನ ಮಾಡೋದನ್ನು ಬಿಟ್ಟು ಖದೀಮರು ಓಡಿ ಹೋಗಿದ್ದಾರೆ.
ಕಳ್ಳತನಕ್ಕೆ ವಿಫಲವಾಗಿ ಪರಾರಿಯಾಗಿರುವ ದರೋಡೆಕೋರ ಗ್ಯಾಂಗ್ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ.