ಇತರೆ

ಮಗನಿಗೆ ತಿನ್ನಲು ಏನಾದರೂ ತರಲು ಹೊರಟಾಗ ಕಣ್ಮುಂದೆ ಪತಿ ಕೊರಳಿಗೆ ಗುಂಡಿಕ್ಕಿ ಕೊಂದ್ರು..  ಉಗ್ರರ ಅಟ್ಟಹಾಸ ಬಿಚ್ಚಿಟ್ಟ ಮಂಜುನಾಥ್ ಪತ್ನಿ

Views: 109

ಕನ್ನಡ ಕರಾವಳಿ ಸುದ್ದಿ: ಜಮ್ಮು-ಕಾಶ್ಮೀರದ ಪಹಲ್ಲಾಮ್‌ನಲ್ಲಿ ನಡೆದ ಉಗ್ರರ ದಾಳಿಗೆ ಪ್ರಾಣ ಕಳೆದುಕೊಂಡ ಶಿವಮೊಗ್ಗದ ಮಂಜುನಾಥ್ ರಾವ್ ಪಂಚಭೂತಗಳಲ್ಲಿ ಲೀನರಾದರು. ಶಿವಮೊಗ್ಗದ ತುಂಗಾ ನದಿ ತೀರದ ರೋಟರಿ ಚಿತಾಗಾರದಲ್ಲಿ ಬ್ರಾಹ್ಮಣ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಮಂಜುನಾಥ್ ರಾವ್ ಚಿತೆಗೆ ಪುತ್ರ ಅಭಿಜೇಯ ಅಗ್ನಿ ಸ್ಪರ್ಶ ಮಾಡಿದರು.

ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಮಂಜುನಾಥ್‌ ಅವರ ಪತ್ನಿ ಪಲ್ಲವಿ, ಪಹಲ್ಲಾಮ್ ನಲ್ಲಿ ನಡೆದ ಉಗ್ರರ ದಾಳಿಯ ಭೀಕರತೆಯನ್ನು ಬಿಚ್ಚಿಟ್ಟರು. ಉಗ್ರರ ಅಟ್ಟಹಾಸ ಹೇಗಿತ್ತು ಎನ್ನುವುದನ್ನು ತಿಳಿಸಿದ್ದಾರೆ.

ಪಹಲ್ಲಾಮ್ ಗೆ ಕುದುರೆ ಹತ್ತಿ ಹೋದ ಬಳಿಕ ಪಲ್ಲವಿ ಮತ್ತು ಮಂಜುನಾಥ್ ಮಗನಿಗೆ ತಿನ್ನಲು ಏನಾದರೂ ತರಲು ಅಂತ ಹೊರಟಾಗ ಉಗ್ರರು ಪಾಯಿಂಟ್ ಬ್ಲಾಂಜ್ ರೇಂಜಿಂದ ಮಂಜುನಾಥ್‌ ಅವರ ಕುತ್ತಿಗೆಗೆ ಗುಂಡು ಹಾರಿಸಿದರಂತೆ. ಒಂದೇ ಗುಂಡು ಕ್ಷಣಾರ್ಧದಲ್ಲಿ ಅವರ ಪ್ರಾಣ ಪಕ್ಷಿ ಹಾರಿಹೋಯಿತು ಎಂದು ಪಲ್ಲವಿ ಕಣ್ಣೀರಿಡುತ್ತಾ ಹೇಳಿದ್ದಾರೆ.

ನನ್ನ ಗಂಡನನ್ನು ಕೊಂದಿದ್ದೀರಾ, ನನ್ನನ್ನೂ ಕೊಲ್ಲಿ ಎಂದು ಪತ್ನಿ ಕೇಳಿದ್ದಾರೆ. ಅವರ ಮಗ ಕೂಡ ಕುತ್ತೆ ಮುಝ ಬಿ ಮಾ‌ರ್ ಡಾಲೋ ಅಂತ ಕೂಗಿದ್ದಾನೆ. ಆದರೆ ಆ ಉಗ್ರ ಆತನಿಗೆ ನಹೀ ತುಮ್ ಜಾಕೆ ಮೋದಿಕೋ ಬತಾವೋ ಅಂತ ಹೇಳಿದ ಎಂದು ತಿಳಿಸಿದ್ದಾರೆ.

Related Articles

Back to top button
error: Content is protected !!