ಇತರೆ

ಹಣಕಾಸಿನ ವಿಚಾರ ಎರಡು ಕುಟುಂಬಗಳ ನಡುವೆ ಜಗಳ :3 ವರ್ಷದ ಮಗು ಬಲಿ

Views: 34

ಅಥಣಿ : ಹಣಕಾಸಿನ ವಿಚಾರವಾಗಿ ಎರಡು ಕುಟುಂಬಗಳ ಮಧ್ಯೆ ನಡೆದ ಜಗಳದಲ್ಲಿ ಮೂರು ವರ್ಷದ ಬಾಲಕಿ ಓರ್ವ ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ತಾಲೂಕಿನ ಬುರ್ಲಟ್ಟಿ ಗ್ರಾಮದಲ್ಲಿ ಜರುಗಿದೆ.

ಕೊಲೆಯಾದ ಬಾಲಕಿಯನ್ನು ಶ್ರೀನಿಧಿ ಕಾಡಪ್ಪ ಕಾಳಾಪಾಟೀಲ್ (3) ಎನ್ನಲಾಗಿದೆ. ಜೋತಿಭಾ ತುಕಾರಾಮ ಬಾಬರ ಕೊಲೆ ಆರೋಪಿ ಎನ್ನಲಾಗಿದೆ.

ಜ್ಯೋತಿಬಾ ತುಕಾರಾಮ ಬಾಬರ ಹಣಕಾಸಿನ ವಿಚಾರವಾಗಿ ಮತ್ತೊಂದು ಕುಟುಂಬದೊಂದಿಗೆ ನಡೆದ ಜಗಳ ತಾರಕಕ್ಕೇರಿಯಾದಾಗ ಮಧ್ಯಪ್ರವೇಶ ಮಾಡಿದ ಮೂರು ವರ್ಷದ ಮಗುವನ್ನು ಜೋತಿಭಾ ತುಕಾರಾಮ ಬಾಬರ ಮಗುವಿನ ಮೇಲೆ ಕಾಲಿಟ್ಟು ಕೊಲೆ ಮಾಡಿದ್ದಾನೆ ಎಂದು ಪೋಲೀಸರು ತಿಳಿಸಿದ್ದಾರೆ. ಐಗಳಿ ಪೋಲೀಸ್ ಠಾಣೆಯಲ್ಲಿ ಜ್ಯೋತಿಬಾ ಬಾಬರ, ಅರುಣಾ ಬಾಬರ, ದೇವರಾಜ ಬಾಬರ, ಯುವರಾಜ್ ಬಾಬರ ಎಂಬ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಬಗ್ಗೆ ಐಗಳಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button
error: Content is protected !!