ಸಿದ್ದಾಪುರ ಜ್ಞಾನಸರಸ್ವತಿ ಕಾಲೇಜಿನಲ್ಲಿ “ಅನ್ಫರ್ಲ್ ಡ್ರೀಮ್ಸ್” ಕಾರ್ಯಕ್ರಮ
Views: 13
ಕನ್ನಡ ಕರಾವಳಿ ಸುದ್ದಿ: ಸಿದ್ದಾಪುರದ ಜ್ಞಾನಸರಸ್ವತಿ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾದ “ಅನ್ಫರ್ಲ್ ಡ್ರೀಮ್ಸ್” ಕಾರ್ಯಕ್ರಮ ಅಕ್ಟೋಬರ್ 29 ಹಮ್ಮಿಕೊಳ್ಳಲಾಗಿತ್ತು.
ವಿದ್ಯಾರ್ಥಿಗಳು ಶೈಕ್ಷಣಿಕ ಹಾಗೂ ಮಾನಸಿಕವಾಗಿ ಸ್ಪರ್ಧಾತ್ಮಕ ಯುಗಕ್ಕೆ ತೆರೆದುಕೊಳ್ಳುವಾಗ ಎದುರಿಸಬಹುದಾದ ಭವಿಷ್ಯದ ಸಮಸ್ಯೆ ಸವಾಲುಗಳನ್ನು ಗಮನದಲ್ಲಿರಿಸಿಕೊಂಡು ವಿಶೇಷ ಉಪನ್ಯಾಸವನ್ನು ಖ್ಯಾತ ವೃತ್ತಿ ಶಿಕ್ಷಣ ಮಾರ್ಗದರ್ಶಕರು ಹಾಗೂ ಆಪ್ತ ಸಮಾಲೋಚಕರಾದ ಎನ್.ಜಿ. ಸ್ವಾಮಿ ನೀಡಿದರು.
ವಿದ್ಯಾರ್ಥಿಗಳ ಸುಪ್ತ ಚೇತನ ವನ್ನು ಜಾಗೃತ ಗೊಳಿಸುವ ಮಾತುಗಳನ್ನಾಡಿದ ಅವರು ತಮ್ಮ ಹಣೆಬರಹಗಳನ್ನು ಶಿಕ್ಷಣದ ಮೂಲಕ ತಿದ್ದಿಕೊಳ್ಳುವ ಸದಾವಕಾಶ ನಿಮಗಿದೆ ಎಂಬುದನ್ನು ಮನದಟ್ಟು ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸುಮುಖ ಎಜ್ಯುಕೇಶನಲ್ ಟ್ರಸ್ಟ್ ನ ಅಧ್ಯಕ್ಷರಾದ ಬಿ.ಎಸ್.ಸುರೇಶ್ ಶೆಟ್ಟಿ ಯವರು ಪ್ರಾಸ್ತಾವಿಕ ಮಾತುಗಳನ್ನಾಡಿ ವಿದ್ಯಾರ್ಥಿಗಳು ಭವಿಷ್ಯದ ಕನಸನ್ನು ನನಸಾಗಿಸಿಕೊಳ್ಳುವಲ್ಲಿ ನಿರಂತರ ಪರಿಶ್ರಮದ ಅಗತ್ಯವಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸುಮುಖ ಎಜುಕೇಶನ್ ಟ್ರಸ್ಟ್ ನ ಕಾರ್ಯದರ್ಶಿ ಪಾಂಡುರಂಗ ಪಡಿಯಾರ್,ಶಿಕ್ಷಕ ಉಮೇಶ್,ಪ್ರಾಂಶುಪಾಲ ಅಮರೇಶ್ ಹೆಗ್ಡೆ, ಉಪಪ್ರಾಂಶುಪಾಲ ಹರ್ಷ ಶೆಟ್ಟಿ ಹಾಗೂ ಕಾಲೇಜಿನ ಎಲ್ಲಾ ಉಪನ್ಯಾಸಕ ಉಪನ್ಯಾಸಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಕನ್ನಡ ಉಪನ್ಯಾಸಕ ನಾಗರಾಜ್ ಗುಳ್ಳಾಡಿ ಕಾರ್ಯಕ್ರಮ ನಿರೂಪಿಸಿದರು.






