ರಾಜಕೀಯ

ಸಿಎಂ ಆಯ್ಕೆ ಕಗ್ಗಂಟು: ಇಂದು ಹೈಕಮಾಂಡ್ ನಿಧಾ೯ರ 

Views: 0

ಡಿ. ಕೆ. ಶಿವಕುಮಾರ ಮತ್ತು ಸಿದ್ದರಾಮಯ್ಯ ಮುಖ್ಯಮಂತ್ರಿ ಪಟ್ಟಕ್ಕೆ ಪಟ್ಟು ಹಿಡಿದ ಕಾರಣ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನ ಆಯ್ಕೆಗಾಗಿ ಭಾನುವಾರ ನಡೆದ ಸಭೆಯಲ್ಲಿ ಒಮ್ಮತದ ತೀಮಾ೯ನ ಸಾಧ್ಯವಾಗಿಲ್ಲ. ಇಂದು ಹೈಕಮಾಂಡ್ ಅಂತಿಮ ನಿರ್ಧಾರ ಕೈಗೊಂಡು ನೂತನ ಮುಖ್ಯಮಂತ್ರಿ ಆಯ್ಕೆಯಾಗುವ ಸಂಭವವಿದೆ.

ಡಿಕೆಸಿ ಸಿಎಂ ಆಗಿಯೇ ವಿಧಾನ ಸೌಧ ಪ್ರವೇಶಿಸುವುದು ಎಂದು ಪಟ್ಟು ಹಿಡಿದಿದ್ದಾರೆ. ಒಕ್ಕಲಿಗ ಪರ ಮಠಾಧೀಶರು ಡಿಕೆಸಿಯೇ ಮುಖ್ಯಮಂತ್ರಿ ಆಗಬೇಕೆಂದು ಒತ್ತಾಯಿಸಿದ್ದಾರೆ.

ಸಿದ್ದರಾಮಯ್ಯ ಪರ ಬೆಂಬಲಿಗರು, ಅಭಿಮಾನಿಗಳಿಂದ ಶಕ್ತಿ ಪ್ರದಶ೯ನ ನಡೆಸಿದರು.

ಇಂದು ಸಂಧಾನ : ಅಂತಿಮವಾಗಿ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ವಿಚಾರವನ್ನು ಹೈಕಮಾಂಡ್ ವಿವೇಚನೆಗೆ ಬಿಡುವ ನಿಧಾ೯ರವನ್ನು ತೆಗೆದುಕೊಂಡು, ಇಂದು ಡಿಕೆಸಿ, ಸಿದ್ಧರಾಮಯ್ಯ ಇಬ್ಬರನ್ನು ಡಿಲ್ಲಿಗೆ ಕರೆಸಿ, ಒಮ್ಮತದ ನಿಣ೯ಯ ತೆಗೆದುಕೊಳ್ಳುವ ಸಾಧ್ಯತೆ ಇದೆ.

ಪ್ರಥಮ ಅವಧಿಗೆ ಸಿದ್ಧರಾಮಯ್ಯ ಮುಖ್ಯಮಂತ್ರಿಯಾಗಿ, ಡಿಕೆಸಿಗೆ ಡಿಸಿಎಂ ಮಾಡಿ ಪ್ರಬಲ ಖಾತೆಗಳನ್ನು ಅವರ ಬಣಕ್ಕೆ ನೀಡುವ ವಿಚಾರವಾಗಿ ಹೈಕಮಾಂಡ್ ಮನವೊಲಿಸಬಹುದು. ಇದಕ್ಕೆ ಒಪ್ಪದಿದ್ದರೆ 3 ನೇ ವ್ಯಕ್ತಿಯನ್ನು ಮುಖ್ಯಮಂತ್ರಿ ರೇಸ್ ನಲ್ಲಿ ಬರಬಹುದು.

Related Articles

Back to top button
error: Content is protected !!