ಸಿಇಟಿ ಮರು ಪರೀಕ್ಷೆ ಇಲ್ಲ, ಪಠ್ಯಕ್ಕೆ ಹೊರತಾದ ಪ್ರಶ್ನೆ ಕೈಬಿಡಲು ಉನ್ನತ ಶಿಕ್ಷಣ ಇಲಾಖೆ ನಿರ್ಧಾರ

Views: 70
ಬೆಂಗಳೂರು: ಎಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್ಗಳ ಪ್ರವೇಶಕ್ಕಾಗಿ ನಡೆದಿದ್ದ ಸಿಇಟಿಯಲ್ಲಿ (CET) ಪಠ್ಯಕ್ಕೆ ಹೊರತಾದ ಪ್ರಶ್ನೆಗಳು ಸೇರಿದ್ದರಿಂದ ಉಂಟಾಗಿದ್ದ ಗೊಂದಲಕ್ಕೆ ಪರಿಹಾರ ಸಿಕ್ಕಿದೆ.
ಪಠ್ಯಕ್ಕೆ ಹೊರತಾದ ಪ್ರಶ್ನೆಗಳನ್ನು ಕೈಬಿಡಲು ಉನ್ನತ ಶಿಕ್ಷಣ ಇಲಾಖೆ ನಿರ್ಧರಿಸಿದ್ದು, ಸಿಇಟಿ ಮರು ಪರೀಕ್ಷೆ ನಡೆಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ
ಭೌತಶಾಸ್ತ್ರದ 9, ರಸಾಯನಶಾಸ್ತ್ರ 15, ಗಣಿತ 15, ಜೀವಶಾಸ್ತ್ರ 11 ಅಂಕಗಳ ಪಠ್ಯಕ್ಕೆ ಹೊರತಾದ ಪ್ರಶ್ನೆಗಳನ್ನು ಕೈಬಿಡಲು ತಜ್ಞರ ಸಮಿತಿ ಶಿಫಾರಸು ಮಾಡಿತ್ತು. ತಜ್ಞರ ವರದಿ ಆಧರಿಸಿ ಪ್ರಶ್ನೆಗಳನ್ನು ಕೈ ಬಿಡಲು ಇಲಾಖೆ ನಿರ್ಧರಿಸಿದೆ.
ಪಠ್ಯಕ್ಕೆ ಹೊರತಾದ ಪ್ರಶ್ನೆಗಳನ್ನು ಬಿಟ್ಟು ಉಳಿದ ಪ್ರಶ್ನೆಗಳನ್ನು ಅಂಕಕ್ಕೆ ಪರಿಗಣಿಸಲು ಇಲಾಖೆ ನಿರ್ಧರಿಸಿದೆ. ಅಲ್ಲದೇ ಸಮಿತಿ ಶಿಫಾರಸಿನಂತೆ 2 ಪ್ರಶ್ನೆಗೆ ಗ್ರೇಸ್ ಅಂಕ ನೀಡಲು ಕೆಇಎ ಪರಿಗಣಿಸಿದೆ. ಮೇ ತಿಂಗಳ ಕೊನೆ ವಾರದಲ್ಲಿ ಸಿಇಟಿ ಫಲಿತಾಂಶ ಪ್ರಕಟ ಮಾಡುವುದಾಗಿ ತಿಳಿಸಿದರು
* ಔಟ್ ಆಫ್ ಸಿಲಬಸ್ ಆಗಿರೋ ಭೌತಶಾಸ್ತ್ರ 9, ರಸಾಯನಶಾಸ್ತ್ರ 15, ಗಣಿತ 15, ಜೀವಶಾಸ್ತ್ರ 11 ಪ್ರಶ್ನೆಗಳನ್ನು ಕೈಬಿಡಲಾಗುತ್ತದೆ.
* ಔಟ್ ಆಫ್ ಸಿಲಬಸ್ ಪ್ರಶ್ನೆಗಳು ಕೈಬಿಟ್ಟ ಬಳಿಕ ಉಳಿದ ಪ್ರಶ್ನೆಗಳಿಗೆ ವಿದ್ಯಾರ್ಥಿಗಳ ಅಂಕ ಲೆಕ್ಕ ಹಾಕಲಾಗುತ್ತದೆ. ಅಂದರೆ 60 ಅಂಕದ ಬದಲಾಗಿ ಔಟ್ ಆಫ್ ಸಿಲಬಸ್ ಪ್ರಶ್ನೆಗಳು ಬಿಟ್ಟು ಉಳಿದ ಪ್ರಶ್ನೆಗಳ ಅಂಕಗಳನ್ನೆ ಪರಿಗಣಿಸಲಾಗುತ್ತದೆ.
* 4 ವಿಷಯಗಳು ಸೇರಿ 240 ಪ್ರಶ್ನೆಗಳು 240 ಅಂಕಗಳು ಇತ್ತು.
* 240 ಪ್ರಶ್ನೆಗಳಲ್ಲಿ 50 ಅಂಕ ಔಟ್ ಆಫ್ ಸಿಲಬಸ್ ತೆಗೆದರೆ 190 ಪ್ರಶ್ನೆಗಳಿಗೆ ಅಂಕಗಳನ್ನು ಮೌಲ್ಯಮಾಪನ ಮಾಡಿ ವಿದ್ಯಾರ್ಥಿಗಳಿಗೆ ರಾಂಕ್ ನೀಡಲಾಗುತ್ತದೆ.
ಔಟ್ ಆಫ್ ಸಿಲಬಸ್ ಪ್ರಶ್ನೆ ಬಿಟ್ಟು ಉಳಿದ ಪ್ರಶ್ನೆಗಳ ವಿವರ, ಅಂಕಗಳ ವಿವರ
ಭೌತಶಾಸ್ತ್ರ- 51 ಪ್ರಶ್ನೆಗಳು ಅಂತಿಮ
ರಸಾಯನಶಾಸ್ತ್ರ- 45 ಪ್ರಶ್ನೆಗಳು ಅಂತಿಮ
ಗಣಿತ- 45 ಪ್ರಶ್ನೆಗಳು ಅಂತಿಮ
ಜೀವಶಾಸ್ತ್ರ- 49 ಪ್ರಶ್ನೆಗಳು ಅಂತಿಮವಾಗಿ ಲೆಕ್ಕ ಹಾಕಲಾಗುತ್ತದೆ.






