ಸಾರ್ವಜನಿಕ ಸ್ಥಳಗಳಲ್ಲಿ ಮಟ್ಕಾ ಜುಗಾರಿ ಆಡುತ್ತಿದ್ದವರ ಮೇಲೆ ದಾಳಿ; ಮೂವರು ಕೋಟ ಪೊಲೀಸರ ವಶಕ್ಕೆ

Views: 42
ಕನ್ನಡ ಕರಾವಳಿ ಸುದ್ದಿ: ಕೋಟ ಠಾಣೆ ವ್ಯಾಪ್ತಿಯ ಶಿರಿಯಾರ, ನಂಚಾರಿನ ಮೂರು ಕಡೆ ಮಟ್ಕಾ ನಿರತರ ಮೇಲೆ ಠಾಣೆ ಉಪನಿರೀಕ್ಷಕ ಪ್ರವೀಣ್ ಕುಮಾರ್ ಹಾಗೂ ಕೈಮ್ ವಿಭಾಗದ ಸುಧಾ ಪ್ರಭು ದಾಳಿ ನಡೆಸಿ ಮೂವರನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನಂಚಾರು ಜಂಕ್ಷನ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ಆಡುತ್ತಿದ್ದ ದೇವೇಂದ್ರನನ್ನು ವಶಕ್ಕೆ ಪಡೆದಿದ್ದು ಆತನ ಕೈಯಲ್ಲಿದ್ದ ಜುಗಾರಿ ಆಟಕ್ಕೆ ಬಳಸಿದ ಪರಿಕರ ಹಾಗೂ 4,550 ರೂ ನಗದನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ನಂಚಾರು ಗ್ರಾಮದ ಬೊಬ್ಬರ್ಯ ಕೊಡ್ಲು ಬಳಿ ಮಟ್ಕಾ ಜುಗಾರಿ ಆಡುತ್ತಿದ್ದ ಉದಯ, ಭಾಸ್ಕರನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆರೋಪಿಯಿಂದ 2,270 ರೂ. ಹಣವನ್ನು ವಶಕ್ಕೆ ಪಡೆಯಲಾಗಿದೆ.
ಶಿರಿಯಾರ ಗ್ರಾಮದ ಸಾಹೇಬ್ರಕಟ್ಟೆ ಜಂಕ್ಷನ್ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ನಿರತನಾಗಿದ್ದ ಶಿವರಾಜ್ ಎನ್ನುವಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು ಆಟಕ್ಕೆ ಬಳಸಿದ ಪರಿಕರ ಹಾಗೂ 1,830 ರೂ. ಹಣವನ್ನು ವಶಕ್ಕೆ ಪಡೆದಿದ್ದಾರೆ.