ಇತರೆ

ಸರಣಿ ಅಪಘಾತ :ಓವ೯ ಸಾವು 

Views: 282

ಕುಂದಾಪುರ : ಕುಂಭಾಸಿ ರಾಷ್ಟ್ರೀಯ ಹೆದ್ದಾರಿ ಶ್ರೀ ಚಂಡಿಕಾ ದುಗಾ೯ಪರಮೇಶ್ವರಿ ದೇಗುಲದ ಎದುರು ಅತೀ ವೇಗವಾಗಿ ಬಂದ ಮಹೇಂದ್ರ ವಾಹನಕ್ಕೆ ಸೈಕಲ್, ಹೋಂಡಾ ಆ್ಯಕ್ಟಿವಾ, ಬೈಕಿಗೆ ಢಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೊವ೯ ಸ್ಥಳದಲ್ಲೇ ಸಾವನಪ್ಪಿದ ಘಟನೆ ಎ. 23 ರಂದು ಸಂಜೆ ಸಂಭವಿಸಿದೆ.

ಉಡುಪಿಯಿಂದ ಕುಂದಾಪುರದ ಕಡೆಗೆ ಅತೀ ವೇಗವಾಗಿ ಬಂದ ಮಹೇಂದ್ರ ವಾಹನಕ್ಕೆ ಅದೇ ಮಾಗ೯ದಲ್ಲಿ ಸಂಚರಿಸುತ್ತಿರುವ ಸೈಕಲ್ ಸವಾರಿ, ಹೋಂಡಾ ಆ್ಯಕ್ಟಿವಾ, ಬೈಕ್ ಗೆ ಢಿಕ್ಕಿ ಹೊಡೆದು ನಾಗರಾಜ್ ದೇವಾಡಿಗ ( 40 ) ಮೃತರಾದರು. ಮೃತರ ಪತ್ನಿ, ತಾಯಿ, ಪುತ್ರನನ್ನು ಅಗಲಿದ್ದಾರೆ.

ಸೈಕಲ್ ಸವಾರ ಕೃಷ್ಣ ದೇವಾಡಿಗ ಗಂಭೀರ ಗಾಯಗೊಂಡು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೊವ೯ ಸವಾರ ಸಂತೋಷ ದೇವಾಡಿಗ ಬೈಕ್ ನಿಲ್ಲಿಸಿ ಪಕ್ಕದ ಅಂಗಡಿಗೆ ತಂಪು ಪಾನೀಯ ಕುಡಿಯಲು ಹೋಗಿದ್ದ ಕಾರಣ ಸಂಭವಿಸಬಹುದಾದ ಅಪಘಾತದಿಂದ ಪಾರಾಗಿದ್ದಾರೆ.

ಘಟನಾ ಸ್ಥಳಕ್ಕೆ ಕುಂದಾಪುರ ಠಾಣಾಧಿಕಾರಿ ನಂದಕುಮಾರ್ ಹಾಗೂ ಸಿಬ್ಬಂದಿಗಳು ಧಾವಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Related Articles

Back to top button
error: Content is protected !!