ರಾಜಕೀಯ

ಸಂಪುಟದಲ್ಲಿ ದ.ಕ ಮತ್ತು ಉಡುಪಿ ಜಿಲ್ಲೆಗಳಿಗೆ ಪ್ರಾತಿನಿಧ್ಯ ಇಲ್ಲ : ಬೇರೆ ಜಿಲ್ಲೆಯವರು ಉಸ್ತುವಾರಿ ಸಚಿವರು

Views: 0

ರಾಜ್ಯ ಸಚಿವ ಸಂಪುಟದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ಪ್ರಾತಿನಿಧ್ಯ ಇಲ್ಲದಂತಾಗಿದೆ. ಹೀಗಾಗಿ ಈ ಜಿಲ್ಲೆಗಳಿಗೆ ಬೇರೆ ಜಿಲ್ಲೆಯವರು ಉಸ್ತುವಾರಿ ಸಚಿವರಾಗುತ್ತಾರೆ ಎಂಬುವುದೆ ನೆಮ್ಮದಿ

ಉಭಯ ಜಿಲ್ಲೆಗಳ 13 ವಿಧಾನ ಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ 2 ಸ್ಥಾನಗಳಲ್ಲಿ ಮಾತ್ರ ಗೆದ್ದಿದೆ. ಮಂಗಳೂರು ಕ್ಷೇತ್ರದಿಂದ ಯು. ಟಿ. ಖಾದರ್ ಮತ್ತು ಅಶೋಕ ಕುಮಾರ್ ರೈ ಗೆದ್ದಿದ್ದು, ಕರಾವಳಿ ಕ್ಷೇತ್ರ ವ್ಯಾಪ್ತಿಯಲ್ಲಿ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಬಿ. ಕೆ. ಹರಿಪ್ರಸಾದ್ ಆಯ್ಕೆಯಾಗಿದ್ದರು.

ಬಿ. ಕೆ ಹರಿಪ್ರಸಾದ್ ಮತ್ತು ಮಂಜುನಾಥ ಭಂಡಾರಿ ಅವರ ಹೆಸರು ಸಚಿವ ಸ್ಥಾನಕ್ಕೆ ಕೇಳಿ ಬಂದಿದ್ದವು.

ಇವರಿಬ್ಬರೂ ಸಂಪುಟ ಸೇರಲು ಸಾಕಷ್ಟು ಕಸರತ್ತು ನಡೆಸಿದರು, ಜಿಲ್ಲೆಯ ಕೋಟಾದಲ್ಲಿ ಸಚಿವ ಸ್ಥಾನ ಸಿಗಬಹುದು ಎಂಬ ಸ್ಥಳೀಯ ಕಾಂಗ್ರೆಸಿಗರಲ್ಲಿ ಇತ್ತು, ಆದರೆ, ಈ ಇಬ್ಬರನ್ನು ಸಚಿವ ಸ್ಥಾನಕ್ಕೆ ಮಣೆಹಾಕಿಲ್ಲ.

Related Articles

Back to top button
error: Content is protected !!