ಆರೋಗ್ಯ

ಸಂತಾನಹರಣ ಆಪರೇಷನ್ ವೇಳೆ ವೈದ್ಯರ ಎಡವಟ್ಟು ಕರುಳು ಕಟ್; ಬಾಣಂತಿ ಸಾವು, ಪ್ರತಿಭಟನೆ

Views: 127

ಕನ್ನಡ ಕರಾವಳಿ ಸುದ್ದಿ: ವೈದ್ಯೆಯೊಬ್ಬರ ನಿರ್ಲಕ್ಷಕ್ಕೆ ಬಾಣಂತಿಯೊಬ್ಬರು ಬಲಿಯಾಗಿರುವ ಘಟನೆ ನಡೆದಿದೆ. ಸಂತಾನಾರಣ ಶಸ್ತ್ರಚಿಕಿತ್ಸೆ ವೇಳೆ ಸಣ್ಣ ಕರುಳು ಕಟ್ ಆಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಬಾಣಂತಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕು ಆಸ್ಪತ್ರೆಯಲ್ಲಿ ಈ ದುರಂತ ಸಂಭವಿಸಿದೆ. ತಾಲೂಕು ಆಸ್ಪತ್ರೆಯ ಮುಂದೆ ಬಾಣಂತಿ ಶವವಿಟ್ಟು ಕುಟುಂಬಸ್ಥರು ಪ್ರತಿಭಟನೆ ನಡೆಸುತ್ತಿದ್ದಾರೆ. ತಾಲೂಕು ಆಸ್ಪತ್ರೆಯ ಸ್ತ್ರೀರೋಗ ತಜ್ಞೆ ಡಾ.ವಾಣಿ ರೆಡ್ಡಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಬಟ್ಲಹಳ್ಳಿ ನಿವಾಸಿ ನರ್ಮದಾ ಎರಡು ಮಕ್ಕಳಾದ ಬಳಿಕ ಸಂತಾನಹರಣ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರು. ಡಾ.ವಾಣಿ ರೆಡ್ಡಿ ಶಸ್ತ್ರಚಿಕಿತ್ಸೆ ನಡೆಸಿದ್ದರು. ಈ ವೇಳೆ ಆಕಸ್ಮಿಕವಾಗಿ ಸಣ್ಣ ಕರಳು ಕಟ್ ಆಗಿರುವ ಆರೋಪ ಕೇಳಿಬಂದಿದೆ.

ಇದರಿಂದ ಇನ್ಫೆಕ್ಷನ್ ಆಗಿ ಅನಾರೋಗ್ಯದಿಂದ ನರ್ಮದಾ ಬಳಲುತ್ತಿದ್ದರು. ಈಗ ಚಿಕಿತ್ಸೆ ಫಲಕಾರಿಯಾಗದೇ ನರ್ಮದಾ ಸಾವನ್ನಪ್ಪಿದ್ದಾರೆ. ನರ್ಮದಾ ಸಾವಿಗೆ ಡಾ.ವಾಣಿ ರೆಡ್ಡಿಯೇ ಕಾರಣ ಎಂದು ಕುಟುಂಬದವರು ಆರೋಪಿಸಿ ಪ್ರತಿಭಟನೆ ನಡೆಸಿದ್ದಾರೆ.

Related Articles

Back to top button
error: Content is protected !!