ಶಿಕ್ಷಣ

ಶಿರೂರು ಜ್ಞಾನದಾ ಶಿಕ್ಷಣ ಸಂಸ್ಥೆಯಲ್ಲಿ 70ನೇ ಕನ್ನಡ ರಾಜ್ಯೋತ್ಸವ ಆಚರಣೆ

Views: 178

ಕನ್ನಡ ಕರಾವಳಿ ಸುದ್ದಿ:ಶಿರೂರು ಜ್ಞಾನದಾ ಶೈಕ್ಷಣಿಕ ಸಂಸ್ಥೆಯಲ್ಲಿ 70ನೇ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು.

ಸಂಸ್ಥೆಯ ಪ್ರಾಂಶುಪಾಲರಾದ ಡಾ. ರವಿದಾಸ್ ಶೆಟ್ಟಿ ನಾಡದೇವಿ ಭುವನೇಶ್ವರಿಯ ಭಾವಚಿತ್ರಕ್ಕೆ ದೀಪಬೆಳಗಿಸಿ ಪುಷ್ಪನಮನ ಸಲ್ಲಿಸಿ ಮಾತನಾಡಿ, ಕನ್ನಡ ಭಾಷೆ ಕಲಿಯಲು ಸುಲಭ, ಮಾತನಾಡಲು ಸರಳ, ಕನ್ನಡ ಲಿಪಿ ನೋಡಲು ಅಂದ, ಕನ್ನಡ ಮಾತು ಕೇಳಲು ಚೆಂದ, ಪಂಚದ್ರಾವಿಡ ಭಾಷೆಗಳಲ್ಲಿ ಒಂದಾದ ಕನ್ನಡ ಭಾಷೆ ತನ್ನದೇ ಆದ ಇತಿಹಾಸವನ್ನು ಹೊಂದಿದ್ದು ಕನ್ನಡ ಭಾಷೆಯ ನೆಲೆಗಟ್ಟಿನಲ್ಲಿ ಏಕೀಕರಣಗೊಂಡ ಕನ್ನಡನಾಡು ಅತ್ಯಂತ ವಿಶಿಷ್ಟವಾದ ಸಂಸ್ಕೃತಿ ಕಲೆ ಮತ್ತು ಪರಂಪರೆಗೆ ನೆಲೆಯಾಗಿದೆ ಕರುನಾಡಿಗೆ ಕರ್ನಾಟಕ ಎಂದು ನಾಮಕರಣಗೊಂಡು ಐವತ್ತು ವರ್ಷ ಪೂರ್ಣಗೊಂಡಿದ್ದು ಈ ಸುವರ್ಣ ಸಂಭ್ರಮ ಇಡೀ ನಾಡು ಅದ್ದೂರಿಯಾಗಿ ಆಚರಿಸುತ್ತಿದೆ ಕನ್ನಡ ನಾಡು ನುಡಿ ಸಂಸ್ಕೃತಿಗಾಗಿ ಮಿಡಿದ, ಮಡಿದ, ಮೆರೆದ ಎಲ್ಲ ಮಹನೀಯರನ್ನು ಕರ್ನಾಟಕ ರಾಜ್ಯದ ಏಕೀಕರಣಕ್ಕಾಗಿ ಹೋರಾಡಿದ ಮಹಾತ್ಮರನ್ನು ಸ್ಮರಿಸಿ ಗೌರವಿಸಿ ಅವರ ಆಶಯಗಳನ್ನು ಸಾಕಾರಗೊಳಿಸುವುದು ನಮ್ಮೆಲ್ಲರ ಕರ್ತವ್ಯ. ಕಳೆದ ಐವತ್ತು ವರ್ಷಗಳಲ್ಲಿ ರಾಜ್ಯದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿವೆ ಈ ಅವಧಿಯಲ್ಲಿ ಕರ್ನಾಟಕ ತನ್ನದೇ ಆದ ಅಚ್ಚಳಿಯದ ಛಾಪನ್ನು ಒತ್ತಿದೆ ಆಡಳಿತದಿಂದ ಹಿಡಿದು ಸಿನೆಮಾದ ತನಕ, ಕ್ರೀಡೆಯಿಂದ ಹಿಡಿದು ಸಾಹಿತ್ಯದವರೆಗೆ, ವಿಜ್ಞಾನದಿಂದ ಹಿಡಿದು ಕೈಗಾರಿಕೆಯ ತನಕ ಕನ್ನಡನಾಡು ಇಡೀ ದೇಶ ಕಣ್ಣರಳಿಸುವ ಮಾದರಿ ಸಾಧನೆ ತೋರಿದೆ ಎಂದು ಎಲ್ಲರಿಗೂ 70ನೇ ಕನ್ನಡ ರಾಜ್ಯೋತ್ಸವದ ಶುಭಾಶಯ ತಿಳಿಸಿದರು ಸಂಸ್ಥೆಯ ಬೋಧಕ ಮತ್ತು ಬೋಧಕೇತರ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. 

ಶಿಕ್ಷಕಿ ವೇದಾ ಸ್ವಾಗತಿಸಿ, ಶಿಕ್ಷಕಿ ಕವಿತಾ ವಂದಿಸಿ, ಶಿಕ್ಷಕಿ ದೇವಕಿ ನಿರೂಪಿಸಿದರು.

 

Related Articles

Back to top button
error: Content is protected !!