ಇತರೆ

ಶಿರಿಯಾರ- ದಬ್ಬೆಕಟ್ಟೆ ರಸ್ತೆಯಲ್ಲಿ ಸ್ಕೂಟರ್ ಸ್ಕಿಡ್: ಗಂಭೀರ ಗಾಯಗೊಂಡ ಸವಾರ ಸಾವು

Views: 151

ಕುಂದಾಪುರ: ಇಲ್ಲಿನ ಶಿರಿಯಾರ- ದಬ್ಬೆಕಟ್ಟೆ ರಸ್ತೆಯ ಕೊರ್ಗಿ ಗ್ರಾಮ ಪಂಚಾಯಿತಿ ಬಳಿ ಏಪ್ರಿಲ್ 12ರಂದು ರಾತ್ರಿ ವೇಳೆಗೆ ಸ್ಕೂಟರ್ ನಲ್ಲಿ ಸಂಚರಿಸುತ್ತಿದ್ದ ವೇಳೆ ವ್ಯಕ್ತಿ ಸ್ಕಿಡ್ ಆಗಿ ಬಿದ್ದು ಸ್ಕೂಟರ್ ಸವಾರ ಸಂದೀಪ( 28 )ಗಂಭೀರ ಗಾಯಗೊಂಡ,  ಅವರು ಚಿಕಿತ್ಸೆಗೆ ಫಲಕಾರಿಯಾಗದೆ ಏಪ್ರಿಲ್ 13ರಂದು ಸಾವನಪ್ಪಿದ್ದಾರೆ.

ಕೊರ್ಗಿ ಗ್ರಾಮದ ಕೊಣಟ್ಟು ಕೆಳಮನೆಯ ನಿವಾಸಿಯಾಗಿರುವ ಸಂದೀಪ್ ಮನೆಯಿಂದ ಪೇಟೆ ಕಡೆಗೆ ಸಂಚರಿಸುತ್ತಿದ್ದ ವೇಳೆ ಸ್ಕೂಟರ್ ಸ್ಕಿಡ್ ಆಗಿ ಬಿದ್ದಿದ್ದರು. ಪರಿಣಾಮ ತಲೆ ಮತ್ತು ಭುಜಗಳಿಗೆ ಗಂಭೀರ ಗಾಯಗೊಂಡ. ಅವರನ್ನು ಕೋಟೇಶ್ವರದ ಆಸ್ಪತ್ರೆಗೆ ದಾಖಲಿಸಿ ನಂತರ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿ ಚಿಕಿತ್ಸೆಗೆ ಫಲಿಸದೆ ಸಾವನಪ್ಪಿದ್ದಾರೆ.

ಕೊರ್ಗಿಯು ರಾಜು ಅವರು ನೀಡಿದ ದೂರಿನಂತೆ ಕುಂದಾಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button
error: Content is protected !!