ಇತರೆ

ಶಾಲೆಯ ವಾರ್ಷಿಕ ಕ್ರೀಡಾ ಕೂಟದಲ್ಲಿ ಗಾಳಿಗೆ ಪೆಂಡಾಲ್ ಉರುಳಿ ವಿದ್ಯುತ್ ಅವಘಡ; ಓರ್ವ ಸ್ಥಳದಲ್ಲೇ ಸಾವು

Views: 42

ಚಿಕ್ಕಬಳ್ಳಾಪುರ: ಪೋಷಕರ ವಾರ್ಷಿಕ ಕ್ರೀಡಾ ಕೂಟದಲ್ಲಿ ವಿದ್ಯುತ್ ಅವಘಡ ಸಂಭವಿಸಿ ಓರ್ವ ಸ್ಥಳದಲ್ಲೇ ಸಾವನ್ನಪ್ಪಿರೋ ಘಟನೆ ಕಲ್ಲಂತರಾಯನಗುಡ್ಡದ ಖಾಸಗಿ ಶಾಲಾ ಆವರಣದಲ್ಲಿ ನಡೆದಿದೆ.

ಮಧುಗಿರಿ ಮೂಲದ ರಾಘವೇಂದ್ರ (55) ಮೃತ ದುರ್ದೈವಿ.

ಶ್ರೀರಾಮಕೃಷ್ಣ ಶಾರದಾದೇವಿ ಖಾಸಗಿ ಶಾಲೆ ಆವರಣದಲ್ಲಿ ವಾರ್ಷಿಕ ಕ್ರೀಡಾ ಕೂಟ ನಡೆಯುತ್ತಿತ್ತು. ಈ ವೇಳೆ ಪೋಷಕರ  ಕ್ರೀಡಾ ಕೂಟದಲ್ಲಿ ಗಾಳಿಗೆ ಪೆಂಡಾಲ್​ ಉರುಳಿ ಬಿದ್ದಿದೆ. ಆಗ ವಿದ್ಯುತ್ ಸ್ಪರ್ಶದಿಂದ ಶಾರ್ಟ್ ಸರ್ಕ್ಯೂಟ್ ಉಂಟಾಗಿದೆ. ಈ ಘಟನೆಯಲ್ಲಿ ಹಲವು ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನ ಆ ಕೂಡಲೇ ಗೌರಿಬಿದನೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ವಿಷಯ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಗೌರಿಬಿದನೂರು ಪುರ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದಾದ ಬಳಿಕ ಆಸ್ಪತ್ರೆಗೆ ದಾಖಲಾದ ಗಾಯಾಳುಗಳ ಯೋಗಕ್ಷೇಮ ವಿಚಾರಿಸಲು ಶಾಸಕ ಕೆ.ಎಚ್ ಪುಟ್ಟಸ್ವಾಮಿಗೌಡ ಆಗಮಿಸಿದ್ದಾರೆ.

Related Articles

Back to top button
error: Content is protected !!