ಶಿಕ್ಷಣ

ಶಾಲೆಯಲ್ಲಿಯೇ ವಿದ್ಯಾರ್ಥಿ ಏಕಾಎಕಿ ಕುಸಿದು ಬಿದ್ದು ಸಾವು 

Views: 116

ರಾಯಚೂರು: ಲೋ ಬಿಪಿಯಿಂದ ಶಾಲೆಯಲ್ಲಿ ವಿದ್ಯಾರ್ಥಿ ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ಜಿಲ್ಲೆಯ ಸಿರವಾರ ಪಟ್ಟಣದಲ್ಲಿ ನಡೆದಿದೆ.

ತರುಣ್ ಕುಮಾರ (14) ಮೃತಪಟ್ಟ ವಿದ್ಯಾರ್ಥಿ

ಇಲ್ಲಿನ ವಿದ್ಯಾವಾಹಿನಿ ಶಾಲೆಯ 8ನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿ ಎಂದಿನಂತೆ ಶಾಲೆಗೆ ಆಗಮಿಸಿ ತರಗತಿಯಲ್ಲಿ ಕುಳಿತಿದ್ದ. ಶಾಲೆಯಲ್ಲಿ ಏಕಾಎಕಿ ವಿದ್ಯಾರ್ಥಿ ಕುಸಿದು ಬಿದ್ದಿದ್ದು, ಕೂಡಲೇ ವಿದ್ಯಾರ್ಥಿಯನ್ನು ಶಾಲಾ ಆಡಳಿತ ಮಂಡಳಿ ಪಟ್ಟಣದಲ್ಲಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಸಾಗಿಸುವ ವೇಳೆ ಮಾರ್ಗಮಧ್ಯದಲ್ಲಿ ಬಾಲಕ ಸಾವನ್ನಪ್ಪಿದ್ದಾನೆ.

Related Articles

Back to top button
error: Content is protected !!