ಶಿಕ್ಷಣ

ಶಾಲಾ ಮಕ್ಕಳನ್ನು ಟಿಪ್ಪರ್‌ನಲ್ಲಿ ತುಂಬಿಸಿಕೊಂಡು ಅಧ್ಯಯನಕ್ಕೆ ಕರೆದೊಯ್ದ ಶಿಕ್ಷಕರು; ವ್ಯಾಪಕ ಆಕ್ರೋಶ

Views: 77

ಕನ್ನಡ ಕರಾವಳಿ ಸುದ್ದಿ: ಶಾಲಾ ಮಕ್ಕಳನ್ನು ಜೇನು ಕೃಷಿ ಅಧ್ಯಯನ ಮಾಡಲು ತೆರೆದ ಪಿಕಪ್ ಮತ್ತು ಟಿಪ್ಪರ್‌ನಲ್ಲಿ ಕರೆದುಕೊಂಡು ಹೋದ ಕುರಿತು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಬೆಳ್ತಂಗಡಿ ತಾಲೂಕಿನ ಬಳೆಂಜ ಗ್ರಾಮದಲ್ಲಿ ನಡೆದಿದೆ.

ಜೇನು ಕೃಷಿ ಅಧ್ಯಯನಕ್ಕಾಗಿ ವಿದ್ಯಾರ್ಥಿಗಳನ್ನು ಸರಕುಗಳಂತೆ ವಾಹನಗಳಲ್ಲಿ ಕರೆದೊಯ್ಯಲಾಗಿದೆ. ಈ ಘಟನೆ ಬೆಳಕಿಗೆ ಬರುತ್ತಿದ್ದಂತೆ ವಿದ್ಯಾರ್ಥಿಗಳ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಿಕಪ್ ಮತ್ತು ಟಿಪ್ಪ‌ರ್ ಸೇರಿ ಸರಕು ಸಾಗಣೆ ವಾಹನದಲ್ಲಿ ಕೂಲಿ ಕಾರ್ಮಿಕರನ್ನು ಕರೆದುಕೊಂಡು ಹೋಗಲು ಮೋಟಾರು ಕಾಯ್ದೆ ಅಡಿಯಲ್ಲಿ ಅವಕಾಶವಿಲ್ಲದಿರುವಾಗ ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗಿರುವುದು ಏಕೆ ಅದಲ್ಲದೆ, ಈ ರೀತಿ ಕರೆದುಕೊಂಡು ಹೋಗಿ ಮಕ್ಕಳಿಗೆ ಏನಾದರೂ ಅನಾಹುತ ನಡೆದರೆ ಯಾರು ಹೊಣೆ ಎಂದು ಮುಖ್ಯೋಪಾಧ್ಯಾಯ ಕಿರಣ್‌ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಈ ಕುರಿತು ಪೊಲೀಸ್ ಇಲಾಖೆ ಮುಖ್ಯೋಪಾಧ್ಯಾಯ ಕಿರಣ್ ಮತ್ತು ಎರಡು ವಾಹನ ಚಾಲಕರಿಗೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Related Articles

Back to top button
error: Content is protected !!