ವೇಶ್ಯಾವಾಟಿಕೆ ಮಾಡಲು ಒತ್ತಾಯಿಸಿದ ಅತ್ತೆ: ಮಗುವನ್ನು ಬಿಟ್ಟು ಆತ್ಮಹತ್ಯೆಗೆ ಶರಣಾದ ಸೊಸೆ
Views: 145
ಕನ್ನಡ ಕರಾವಳಿ ಸುದ್ದಿ:ವೇಶ್ಯಾವಾಟಿಕೆ ನಡೆಸುವಂತೆ ಅತ್ತೆಯ ಟಾರ್ಚರ್ ಗೆ ಒಳಗಾಗಿ11 ತಿಂಗಳ ಮಗುವನ್ನು ಅನಾಥ ಮಾಡಿ ಸೊಸೆ ನೇಣಿಗೆ ಶರಣಾದ ಘಟನೆ ನಡೆದಿದೆ.
ಅಂಜನಾಬಾಯಿ ಶೇಖರ್ ಪಾಟೀಲ್ (22) ಮೃತ ಮಹಿಳೆ.
ಏನಿದು ಆತ್ಮಹತ್ಯೆಗೆ ಕಾರಣ..?
2022ರಲ್ಲಿ ಬಸವಕಲ್ಯಾಣದ ಶೇಖರ್ ಪಾಟೀಲ್ ಜೊತೆ ವಿವಾಹವಾಗಿದ್ದ ಭಾಲ್ಕಿ ಮೂಲದ ಅಂಜನಾ ಮದುವೆಯಾಗಿದ್ದಳು. ಮದುವೆ ಬಳಿಕ ಅಂಜನಾಬಾಯಿಗೆ ಗಂಡನ ಮನೆಯವರಿಂದ ನಿತ್ಯವೂ ಕಿರುಕುಳ ನೀಡ್ತಿದ್ರಂತೆ. ವೇಶ್ಯಾವಾಟಿಕೆ ಮಾಡಲು ಒತ್ತಾಯಿಸಿ ಮಾನಸಿಕ ಕಿರುಕುಳ ನೀಡಿದ್ದಾಗಿ FIR ನಲ್ಲಿ ಉಲ್ಲೇಖ ಮಾಡಲಾಗಿದೆ.
ನನ್ನ ಮಗಳಿಗೆ ಅನೈತಿಕ ಸಂಬಂಧ ಇಟ್ಕೋಬೇಕು ಎಂದು ಕಿರುಕುಳ ನೀಡಿದ್ದರು ಎಂದು ಮೃತ ಗ್ರಹಿಣಿ ಅಂಜನಾಬಾಯಿ ತಂದೆ ವಿಜಯಕುಮಾರ್ ದೂರು ನೀಡಿದ್ದಾರೆ. ಬಸವಕಲ್ಯಾಣ ನಗರ ಪೊಲೀಸ್ ಠಾಣೆಯಲ್ಲಿ ಫೆಬ್ರವರಿ 6ರಂದು ದೂರು ದಾಖಲಾಗಿದೆ. ಮೃತಳ ಗಂಡ ಶೇಖರ್ ಪಾಟೀಲ್ ಸೇರಿ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.
ತನಿಖೆ ಆರಂಭಿಸಿರುವ ಪೊಲೀಸರು, ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಮೂರು ದಿನಗಳ ಹಿಂದೆ ನಡೆದ ಪ್ರಕರಣ ಇದಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ.






