ಇತರೆ

ವೃದ್ಧೆ ಕೊಲೆಮಾಡಿ ಆಭರಣ ದೋಚಿದ್ದ 3 ಹಂತಕರ ಸೆರೆ

Views: 13

 

 

ಕನ್ನಡ ಕರಾವಳಿ ಸುದ್ಧಿ

ಬೆಂಗಳೂರು : ಬಾಡಿಗೆ ಮನೆ ಕೇಳುವ ನೆಪದಲ್ಲಿ ಮನೆಗೆ ನುಗ್ಗಿ ಒಂಟಿಯಾಗಿ ವಾಸವಾಗಿದ್ದ ವೃದ್ಧೆಯನ್ನು ಉಸಿರುಗಟ್ಟಿಸಿ ಕೊಲೆಮಾಡಿ ಆಭರಣ ದೋಚಿ ಪರಾರಿಯಾಗಿದ್ದ ಮೂವರನ್ನು ಬೆಂಗಳೂರಿನ ಮಹಾಲಕ್ಷ್ಮಿ ಲೇ ಔಟ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಪ್ಲಂಬರ್ ಕೆಲಸ ಮಾಡುತ್ತಿದ್ದ ಅಶೋಕ (40) ಸಿದ್ದರಾಜು ( 34) ಮತ್ತು ಅಂಜನಾ ಮೂತಿ೯ (33) ಬಂಧಿತ ಆರೋಪಿಗಳು.

ಮೂರು ತಿಂಗಳ ಹಿಂದೆ ವೃದ್ಧೆ ಒಂಟಿಯಾಗಿ ವಾಸವಾಗಿರುದನ್ನು ಗಮನಿಸಿ, ನಂತರ ಅವರ ಮನೆಗೆ ಯಾರೆಲ್ಲಾ ಬರುತ್ತಾರೆ ಎಂಬುದನ್ನು ತಿಳಿದುಕೊಂಡು ಈ ಕೃತ್ಯ ಎಸಗಿದ್ದಾರೆ. ವೃದ್ಧೆಯ ಮನೆಗೆ ಹೋಗಿ ಕೈ ಕಾಲುಗಳನ್ನು ಸೀರೆಯಿಂದ ಕಟ್ಟಿಹಾಕಿ ಬಾಯಿಗೆ ಬಟ್ಟೆ ತುರುಕಿಸಿ ಉಸಿರುಗಟ್ಟಿಸಿ ಕೊಲೆ ಮಾಡಿ, ಮೈಮೇಲಿದ್ದ 40 ಗ್ರಾಂ ತೂಕದ 2 ಚಿನ್ನದ ಸರ ಹಾಗೂ 2 ಬಳೆಗಳನ್ನು ದೋಚಿ ಪರಾರಿಯಾಗಿದ್ದರು. ಮನೆಯ ಸುತ್ತ ಮುತ್ತಲಿನ ಸಿಸಿ ಕೆಮರಾ ದೃಶ್ಯಗಳನ್ನು ಪರಿಶೀಲಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

Related Articles

Back to top button
error: Content is protected !!