ರಾಜಕೀಯ

ವಿಧಾನ ಪರಿಷತ್ತಿನ 7ನೇ ಸ್ಥಾನಕ್ಕೆ ತೀವ್ರ ಪೈಪೋಟಿ ಗೆಲುವು ಯಾರಿಗೆ?

Views: 47

ಕನ್ನಡ ಕರಾವಳಿ ಸುದ್ದಿ: ವಿಧಾನಸಭೆಯಿಂದ ವಿಧಾನಪರಿಷತ್ತಿಗೆ ನಡೆಯುವ 7 ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ, 7ನೇ ಸ್ಥಾನಕ್ಕಾಗಿ ಕಾಂಗ್ರೆಸ್ ಜೆಡಿಎಸ್ ನಡುವೆ ತೀವ್ರ ಪೈಪೋಟಿ. ಅಗತ್ಯ ಸಂಖ್ಯಾಬಲ ಇಲ್ಲದಿದ್ದರೂ ಜೆಡಿಎಸ್ ಅಭ್ಯರ್ಥಿ ಕಣಕ್ಕಿಳಿಸಿದ್ದು, ಗೌಪ್ಯ ಮತದಾನ ಅಡ್ಡಮತದಾನದ ಸಾಧ್ಯತೆಗಳು ಚುನಾವಣಾ ಕಣವನ್ನು ಮತ್ತಷ್ಟು ರಂಗೇರಿಸಿವೆ.

ವಿಧಾನಸಭೆಯಲ್ಲಿ ಡಿ.ಸುಧಾಕರ್ ನಿಧನ, ವಿನಯ್ ಕುಲಕರ್ಣಿ ಶಾಸಕತ್ವ ತೆರವಾಗಿರುವುದರಿಂದ ಒಟ್ಟು 222 ಸ್ಥಾನಗಳಿವೆ. 7 ಸ್ಥಾನಗಳಿಗೆ 8 ಅಭ್ಯರ್ಥಿಗಳು ಕಣಕ್ಕಿಳಿದಿರುವುದರಿಂದ ಪ್ರತೀ ಅಭ್ಯರ್ಥಿಯ ಗೆಲುವಿಗೆ ಕನಿಷ್ಠ 28 ಮತ ಬೇಕು. ಪ್ರಸ್ತುತ ವಿಧಾನ ಸಭೆಯಲ್ಲಿ ಕಾಂಗ್ರೆಸ್ ಬಳಿ ಅಧಿಕೃತವಾಗಿ 135 ಮತಗಳಿದ್ದು, ಇಬ್ಬರು ಪಕ್ಷೇತರ ಶಾಸಕರು ಕಾಂಗ್ರೆಸ್ ಬೆಂಬಲಿಸಿದ್ದಾರಲ್ಲದೆ, ಎಸ್‌ಪಿಯ ದರ್ಶನ್ ಪುಟ್ಟಣ್ಣಯ್ಯ ಕೂಡ ಕಾಂಗ್ರೆಸ್ ಪರವಾಗಿದ್ದಾರೆ. ಹೀಗಾಗಿ ಕಾಂಗ್ರೆಸ್ ಬಳಿ 138 ಮತಗಳಿದ್ದು, ಮೊದಲ 4 ಅಭ್ಯರ್ಥಿಗಳು ಅನಾಯಾಸವಾಗಿ ಗೆಲ್ಲಬಹುದಾಗಿದೆ. ಕೊನೆಯ ಅಭ್ಯರ್ಥಿ ವಿನಯ್ ಕಾರ್ತಿಕ್‌ಗೆ ಮತಗಳ ಕೊರತೆ ಎದುರಾಗಲಿದ್ದು, ಬಿಜೆಪಿಯಿಂದ ಉಚ್ಚಾಟಿತ ಎಸ್‌.ಟಿ.ಸೋಮಶೇಖರ್‌ಮತ್ತು ಶಿವರಾಮ್ ಹೆಬ್ಬಾರ್ ಮತಗಳು ಬಿದ್ದರೆ ಗೆಲುವಿನ ದಾರಿ ಸುಲಭವಾಗಲಿದೆ.

ಬಿಜೆಪಿ ಹತ್ತಿರ ಅಧಿಕೃತವಾಗಿ 62 ಮತಗಳಿದ್ದು ಕೆಆರ್‌ಪಿಪಿಯ ಜನಾರ್ದನ ರೆಡ್ಡಿ ಬೆಂಬಲ ಸಿಗುವ ಸಾಧ್ಯತೆಗಳಿವೆ. ಜತೆಗೆ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮನವೊಲಿಕೆ ನಡೆದಿದ್ದು, ಬಿಜೆಪಿಯ ಇಬ್ಬರು ಅಭ್ಯರ್ಥಿಗಳ ಗೆಲುವು ಕಷ್ಟವಾಗಲಾರದು. ಆದರೆ ಜೆಡಿಎಸ್‌ನ ಗೋವಿಂದರಾಜು ಅವರಿಗೆ ಜೆಡಿಎಸ್‌ನ 18 ಶಾಸಕರು ಮತ ಹಾಕಿದರೂ ಮತ್ತೆ 10 ಮತಗಳ ಅಗತ್ಯವಿದೆ. ಬಿಜೆಪಿ ಬಳಿ 9 ಮತಗಳಷ್ಟೇ ಹೆಚ್ಚುವರಿ ಇರಲಿವೆ. ಜತೆಗೆ ಯಾವ ಪಕ್ಷದಿಂದ ಎಷ್ಟು ಶಾಸಕರು ‘ಅಡ್ಡ ಮತದಾನ’ ನಡೆಸಬಹುದು ಎಂಬುದು ಒಂದು ಕುತೂಹಲವಾದರೆ, ಪ್ರಾಶಸ್ತ್ರ ಮತಗಳ ಮೇಲೆ ಗೆಲ್ಲುವವರು ಯಾರು ಎಂಬುದು ಕೂಡ ಕೌತುಕ ಸೃಷ್ಟಿಸಿದೆ.

Related Articles

Back to top button
error: Content is protected !!