ಕರಾವಳಿ

ವಿಕ್ರಂಗೌಡ ಹತ್ಯೆ ಪ್ರಕರಣ: ಎಲ್ಲೋ ಹಿಡಿದು ಹಿಂಸೆ ನೀಡಿ ಸಾಯಿಸಿ, ಉಡುಪಿಯ ಪೀತಬೈಲಿಗೆ  ಮೃತದೇಹ ಹಾಕಿದ್ದಾರೆ, ಮಾಜಿ ನಕ್ಸಲ್ ಪದ್ಮನಾಭ್ ಆಕ್ರೋಶ

Views: 288

ಕನ್ನಡ ಕರಾವಳಿ ಸುದ್ದಿ:ನಕ್ಸಲ್ ನಾಯಕ ವಿಕ್ರಂ ಗೌಡನ ಹತ್ಯೆ ತೀವ್ರ ಖಂಡನೀಯ, ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ಎನ್‌ಕೌಂಟರ್ ಸಮರ್ಥಿಸಿಕೊಂಡಿರುವುದು ದುರಾದೃಷ್ಟಕರ ಎಂದು ಮಾಜಿ ನಕ್ಸಲ್ ನಿಲಗುಳಿ ಪದ್ಮನಾಭ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಕ್ರಂ ಗೌಡನ ಹತ್ಯೆ ಅತ್ಯಂತ ಖಂಡನೀಯ, ಯಾರೂ ಒಪ್ಪುವಂತದ್ದಲ್ಲ. ಸತ್ಯವನ್ನು ತಿಳಿದುಕೊಳ್ಳದೆ ಒಮ್ಮುಖ ವರದಿ ನೋಡಿ ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ಹತ್ಯೆಯನ್ನು ಸಮರ್ಥನೆ ಮಾಡಿಕೊಳ್ಳುತ್ತಿರುವುದು ಯಾರೂ ಒಪ್ಪುವುದಿಲ್ಲ. ಪೊಲೀಸರ ಎನ್‌ಕೌಂಟರ್ ಕಥೆ ಗೊತ್ತಿರೋರು ಯಾರೂ ಇದನ್ನು ಎನ್‌ಕೌಂಟರ್ ಅಂತ ಒಪ್ಪಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.

ಚಿಕ್ಕಮಗಳೂರಿನ ಆಜಾದ್ ಪಾರ್ಕ್ ವೃತ್ತದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇದನ್ನು ಪ್ರಜಾತಂತ್ರವಾದಿಯೂ ಒಪ್ಪುವ ವಿಚಾರವೇ ಅಲ್ಲ. ಹತ್ಯೆ ಕಪೋಲ ಕಲ್ಪಿತವಾಗಿ ಸೃಷ್ಟಿ ಮಾಡಿರುವ ಎನ್‌ಕೌಂಟರ್. ಎಲ್ಲೋ ಹಿಡಿದು ಹಿಂಸೆ ನೀಡಿ ಸಾಯಿಸಿ ಕೊನೆಗೆ ಉಡುಪಿಯ ಪೀತಬೈಲಿಗೆ ತಂದು ಮೃತದೇಹ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.

ಹತ್ಯೆಯ ಬಗ್ಗೆ ಮಾಧ್ಯಮದವರಿಗೂ ತಿಳಿಯದಂತೆ ಯಾರಿಗೂ ಮುಖ ತೋರಿಸದೆ, ಎಲ್ಲಾ ವಿಚಾರವನ್ನು ವಂಚಿಸಿದ್ದಾರೆ. ಆರೋಪಿಯನ್ನು ಕೊಲೆ ಮಾಡಿ ಎಂದು ಸಂವಿಧಾನ ಕೂಡ ಹೇಳಿಲ್ಲ. ವಿಕ್ರಂ ಗೌಡನ ಎನ್‌ಕೌಂಟರ್ ಬಗ್ಗೆ ನ್ಯಾಯಾಂಗ ತನಿಖೆ ಆಗಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಸರ್ಕಾರ ನಕ್ಸಲರಿಗೆ ಮುಖ್ಯವಾಹಿನಿಗೆ ಬನ್ನಿ ಅನ್ನುತ್ತೆ. ಬಂದರೆ ಸರ್ಕಾರದಿಂದ ಏನೂ ಪ್ರಯೋಜನ ಇಲ್ಲ. ಕನ್ಯಾಕುಮಾರಿ ಮುಖ್ಯ ವಾಹಿನಿಗೆ ಬಂದು 8 ವರ್ಷವಾಯ್ತು.ಅತೀ ಕಷ್ಟದಲ್ಲಿದ್ದೇನೆ. ಮನೆ ಕೊಡಲಿಲ್ಲ, ಗುಡಿಸಲಿಗೆ ಕರೆಂಟ್ ಕೊಡ್ಲಿಲ್ಲ. ಕೇಸ್‌ಗಳು ಹಾಗೆಯೇ ಇವೆ. ವಾರಕ್ಕೆ ಮೂರು-ನಾಲ್ಕು ದಿನ ಕೋರ್ಟ್‌ಗೆ ಅಲೆಯುತ್ತಿದ್ದೇನೆ ಎಂದಿದ್ದಾರೆ.

 

Related Articles

Back to top button
error: Content is protected !!