ಜನಮನ

ವಕ್ವಾಡಿ ವಾರಾಹಿ ಏತ ನೀರಾವರಿ ಯೋಜನೆಗೆ ಗ್ರಾಮಸ್ಥರಿಂದ ಮನವಿ

Views: 0

               ಕುಂದಾಪುರ : ಕಾಳಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ವಕ್ವಾಡಿ ಗ್ರಾಮದ ತೆಂಕಬೆಟ್ಟು ಕುಂದಾಪುರ ಮನೆ ಸಮೀಪದ ವಾರಾಹಿ ನಾಲೆಯಿಂದ ಹೊಳೆಗೆ ಹರಿದು ಬರುತ್ತಿರುವ ನೀರಿಗೆ ಏತ ನೀರಾವರಿ ಮೂಲಕ 10 ಎಚ್. ಪಿ. ವಿದ್ಯುತ್ ಪಂಪ್ ನಿಂದ ನೀರು ಹರಿದು ಬಿಟ್ಟು ಇಲ್ಲಿಂದ 1 ಕಿ. ಮೀ ದೂರದ ದೇವರಾಡಿ ದೇವಸ್ಥಾನದನ ಹತ್ತಿರದ ಗುಂಡಿಯಿಂದ ಚರಂಡಿ ಮೂಲಕ ಸುಮಾರು 100 ಮನೆಗಳ ಬಾವಿಗಳಿಗೆ ನೀರು ಹರಿದಾಗ ಇಲ್ಲಿನ ಜನರಿಗೆ ಕೃಷಿ, ಕುಡಿಯುವ ನೀರು, ತೋಟಗಳಿಗೆ ನೀರು ಹರಿದು ಸಮಸ್ತ ನಾಗರಿಕರಿಗೆ ನೀರಿನ ಸಮಸ್ಯೆ ಪರಿಹಾರವಾಗುತ್ತದೆ.
ನಾಗರಿಕರು ಮಾಡಿಕೊಂಡಿರುವ ಮನವಿಗೆ ಪಂಚಾಯತಿಯವರು ಸಕರಾತ್ಮಕವಾಗಿ ಸ್ಪಂಧಿಸಿದ್ದಾರೆ. ನಾಗರಿಕರ ಪರವಾಗಿ ಸೀತಾರಾಮ ಶೆಟ್ಟಿ, ಭಾಸ್ಕರ್, ನಾರಾಯಣ ,ಶಂಕರ್ ಶೆಟ್ಟಿ, ಉದಯ ಶೆಟ್ಟಿ, ರಾಕೇಶ್ ಶೆಟ್ಟಿ, ಬೆಳ್ತಾಡಿ ಮನೆ ಬೇಬಿ ಶೆಡ್ತಿ ಇನ್ನಿತರರು ಮನವಿ ನೀಡಿದರು. ಪಂಚಾಯಿತಿ ಅಧ್ಯಕ್ಷರಾದ ಅಶಾಲತಾ, ರಮೇಶ್ ಶೆಟ್ಟಿ, ಭಾರತಿ, ಅಭಿವೃದ್ಧಿ ಅಧಿಕಾರಿ ಮಧುಸೂದನ್ ಇದ್ದರು.

Related Articles

Back to top button
error: Content is protected !!