ಶಿಕ್ಷಣ

ರ‍್ಯಾಗಿಂಗ್‌ಗೆ ಬೇಸತ್ತು 9 ವರ್ಷದ ಬಾಲಕಿ ಶಾಲೆಯ ನಾಲ್ಕನೇ ಮಹಡಿಯಿಂದ ಹಾರಿ ಆತ್ಮಹತ್ಯೆ

Views: 118

ಕನ್ನಡ ಕರಾವಳಿ ಸುದ್ದಿ: ಖಾಸಗಿ ಶಾಲೆಯೊಂದರಲ್ಲಿ ನಾಲ್ಕನೇ ಮಹಡಿಯಿಂದ ಹಾರಿ 9 ವರ್ಷದ ಬಾಲಕಿ ಮೃತಪಟ್ಟಿರುವ ಆಘಾತಕಾರಿ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ.

ಘಟನೆ ನಡೆದ ದಿನವೂ ಸಹಪಾಠಿಗಳು ತನ್ನ ಮೇಲೆ ಕಿರುಕುಳ ನೀಡಿದ್ದಾರೆ ಎಂದು ತಮ್ಮ ಮಗಳು ಪದೇ ಪದೇ ದೂರು ನೀಡಿದ್ದರೂ ಶಿಕ್ಷಕಿಯೊಬ್ಬರು ನಿರ್ಲಕ್ಷಿಸಿದ್ದಾರೆ ಎಂದು ಪೋಷಕರು  ಆರೋಪಿಸಿದ್ದಾರೆ.

ಬಾಲಕಿ ಕನಿಷ್ಠ ನಾಲ್ಕು ಬಾರಿ ಶಿಕ್ಷಕರನ್ನು ಸಂಪರ್ಕಿಸಿ, ತನ್ನ ತರಗತಿಯ ಕೆಲವು ಹುಡುಗರಿಂದ ಕಿರುಕುಳಕ್ಕೊಳಗಾಗಿರುವುದಾಗಿ ದೂರಿದ್ದಾಳೆ. ಅಲ್ಲದೆ, ಪೋಷಕರೇ ಈ ವಿಷಯವನ್ನು ಈ ಹಿಂದೆ ಹಲವು ಬಾರಿ ಶಾಲೆಯ ಮುಂದೆ ಪ್ರಸ್ತಾಪಿಸಿದ್ದರು ಎಂದು ಅವರು ಆರೋಪಿಸಿದ್ದಾರೆ. ತರಗತಿಯಲ್ಲಿ ಕಿರುಕುಳ ನೀಡಲಾಗುತ್ತಿದೆ ಎಂದು ಅವಳು ಹಲವಾರು ಬಾರಿ ದೂರು ನೀಡಿದ್ದಳು. ಕೆಲವು ಹುಡುಗರು ಅವಳನ್ನು ಅಗೌರವಿಸುತ್ತಿದ್ದರು ಮತ್ತು ಅವಳ ಹೆಸರನ್ನು ಬೇರೆ ಹುಡುಗನೊಂದಿಗೆ ಹೆಸರಿಸಿ ಕೀಟಲೆ ಮಾಡುತ್ತಿದ್ದರು. ಈ ವಿಷಯದ ಬಗ್ಗೆ ನಾನು ಶಿಕ್ಷಕಿಯನ್ನು ಸಂಪರ್ಕಿಸಿದ್ದೆ. ಆದರೆ, ಅವರು ನಿರ್ಲಕ್ಷ್ಯ ವಹಿಸಿದ್ದರು ಎಂದು ಮೃತ ಬಾಲಕಿಯ ತಾಯಿ ಶಿವಾನಿ ತಿಳಿಸಿದರು.

ನವೆಂಬರ್ 1 ರಂದು, ಒಂಭತ್ತು ವರ್ಷದ ಅಮಯ್ರಾ ಸುಮಾರು 48 ಅಡಿ ಎತ್ತರದ ನೀರಜಾ ಮೋದಿ ಶಾಲೆಯ ನಾಲ್ಕನೇ ಮಹಡಿಯಿಂದ ಹಾರಿ ಮೃತಪಟ್ಟಿದ್ದಳು. ಸಂತೋಷ ಮತ್ತು ಪ್ರಕಾಶಮಾನವಾಗಿದ್ದ ಮಗುವಿಗೆ ಕಲ್ಪನೆಗೂ ಮೀರಿದ ಘಟನೆ ನಡೆಯಿತು ಎಂದು ಪೋಷಕರು ದುಃಖಿಸಿದ್ದಾರೆ. ಅವಳನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅಲ್ಲಿಗೆ ತಲುಪುವಾಗಲೇ ಅವಳು ಮೃತಪಟ್ಟಿದ್ದಾಳೆಂದು ಘೋಷಿಸಲಾಯಿತು. ಈ ದುರಂತ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆಕೆ ಕೆಳಕ್ಕೆ ಹಾರುತ್ತಿರುವು ದೃಶ್ಯದ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

 

 

Related Articles

Back to top button
error: Content is protected !!