ಇತರೆ
ರೈಲು ಪ್ರಯಾಣಿಕನಿಗೆ ಚಾಕಲೇಟ್ ನೀಡಿ 4.86 ಲ.ರೂ. ಮೌಲ್ಯದ ಸೊತ್ತು ಕಳವು:ಬೈಂದೂರು ಠಾಣೆಯಲ್ಲಿ ದೂರು

Views: 134
ಕನ್ನಡ ಕರಾವಳಿ ಸುದ್ದಿ: ಕಾರವಾರದಿಂದ ಮಂಗಳೂರಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಗೆ ಅಮಲುಕಾರಕ ಚಾಕಲೇಟ್ ನೀಡಿ 4.86 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಮತ್ತು ನಗದು ದೋಚಲಾಗಿದೆ ಎಂದು ಬೈಂದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬಂಟ್ವಾಳದ ಹರೀಶ ಅವರು ಕಾರವಾರದಿಂದ ಮಂಗಳೂರಿಗೆ ರೈಲಿನಲ್ಲಿ ಬರುವ ಸಂದರ್ಭದಲ್ಲಿ ಭಟ್ಕಳದಲ್ಲಿ ರೈಲು ಏರಿದ್ದ ಸುಮಾರು 35 ವರ್ಷದ ಅಪರಿಚಿತ ವ್ಯಕ್ತಿ ತನ್ನ ಪರಿಚಯ ಮಾಡಿಕೊಂಡು ಚಾಕಲೇಟ್ ನೀಡಿದ್ದನು. ಅದನ್ನು ಸೇವಿಸಿದ ಬಳಿಕ ಗಾಢ ನಿದ್ದೆಗೆ ಜಾರಿದ ಹರೀಶ್ ಬೆಳಿಗ್ಗೆ ಎದ್ದು ನೋಡುವಾಗ ಕುತ್ತಿಗೆಯಲ್ಲಿದ್ದ ಸುಮಾರು 28 ಗ್ರಾಂ ತೂಕದ 2,35,000 ರೂ. ಬೆಲೆಬಾಳುವ ಸರ, 08 ಗ್ರಾಂ ತೂಕದ 70,000 ರೂ. ಬೆಲೆಯ ಉಂಗುರ, ವಾಚ್, ಮೊಬೈಲ್ ಮತ್ತು ಬ್ಯಾಗಿನಲ್ಲಿದ್ದ 1,45,000 ರೂ. ನಗದು ಸಹಿತ ಒಟ್ಟು 4,86,500 ರೂ. ಮೌಲ್ಯದ ವಸ್ತುಗಳು ಕಳವಾಗಿದ್ದವು. ಈ ಕುರಿತು ಅವರು ಅಪರಿಚಿತ ವ್ಯಕ್ತಿಯ ವಿರುದ್ದ ಪೊಲೀಸರಿಗೆ ದೂರು ನೀಡಿದ್ದಾರೆ.