ಇತರೆ

ರೀಲ್ಸ್ ಹುಚ್ಚಿಗೆ ಬೇಸತ್ತು ಜೀವಂತ ಪತ್ನಿಯ ಫೋಟೋಗೆ ಹಾರ ಹಾಕಿ ಗಂಗೆಯಲ್ಲಿ ವಿಸರ್ಜಿಸಿ ಪಿಂಡದಾನ ಮಾಡಿದ ಪತಿ!

Views: 43

ಕನ್ನಡ ಕರಾವಳಿ ಸುದ್ದಿ: ಪತ್ನಿಯ ರೀಲ್ಸ್ ಹುಚ್ಚಿಗೆ ಬೇಸತ್ತು ಪತಿಯೊಬ್ಬ ಹರಿದ್ವಾರದ ಹರ್ ಕಿ ಪೈಡಿಯಲ್ಲಿ ಜೀವಂತ ಪತ್ನಿಯ ಪಿಂಡದಾನ ಮಾಡಿದ್ದಾನೆ. ಪಿಂಡದಾನದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಿವಾದದ ಬೆನ್ನಲ್ಲೇ ಮಹಿಳೆ ಮೌನ ಮುರಿದಿದ್ದು, ಕಣ್ಣೀರು ಇಟ್ಟಿದ್ದಾಳೆ.

ಪತಿ ಮತ್ತು ನನ್ನ ನಡುವೆ ವೈಮನಸ್ಸು ಇದ್ದು, ವಿಚ್ಛೇದನಕ್ಕಾಗಿ  ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿದೆ. ನಾನು ರೀಲ್ಸ್ ಮಾಡುತ್ತಿರುವುದು ನಿಜ, ಅವುಗಳಲ್ಲಿ ಯಾವುದೇ ಅಶ್ಲೀಲತೆ ಇಲ್ಲ ಎಂದು ವಿಡಿಯೋ ಮೂಲಕ ಸ್ಪಷ್ಟಪಡಿಸಿದ್ದಾರೆ.

ಪತಿಯ ಮೇಲೆ ಗಂಭೀರ ಆರೋಪ ಮಾಡಿರುವ ಆಕೆ, ಜಗಳ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾನೆ. ಜನರ ಮುಂದೆ ನನ್ನನ್ನು ಕೆಟ್ಟವಳಾಗಿ ಬಿಂಬಿಸಲು ನಾಟಕವಾಡಿದ್ದಾನೆ ಎಂದು ದೂರಿದ್ದಾಳೆ.

ಜನ ವಿಡಿಯೋದ ಒಂದು ಭಾಗವನ್ನು ಮಾತ್ರ ನೋಡಿ ಕೆಟ್ಟದಾಗಿ ಕಾಮೆಂಟ್ ಮಾಡ್ತಿದ್ದಾರೆ. ಪ್ರತಿ ಘಟನೆಗೂ ಎರಡು ಮುಖಗಳಿರುತ್ತವೆ. ಜನ ನನ್ನ ಪರಿಸ್ಥಿತಿಯನ್ನು ತಿಳಿಯದೆ ತೇಜೋವಧೆ ಮಾಡುತ್ತಿದ್ದಾರೆ. ಈ ಘಟನೆಯಿಂದ ನಾನು ಮನನೊಂದು ಕೆಟ್ಟ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇತ್ತು. ಮಕ್ಕಳ ಮುಖ ನೋಡಿ ಸುಮ್ಮನಾಗಿದ್ದೇನೆ. ಸಮಾಜದ ಮುಂದೆ ನಾನು ತಲೆಬಾಗಲ್ಲ ಎಂದು ವಿಡಿಯೋದಲ್ಲಿ ಗುಡುಗಿದ್ದಾರೆ.

 

Related Articles

Back to top button
error: Content is protected !!